ImportantJob News
Trending

India Post Recruitment 2022: 98 ಸಾವಿರ ನೇಮಕಾತಿಗೆ ಅರ್ಜಿ ಆಹ್ವಾನ: SSLC & PUC ಆದವರು ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಉದ್ಯೋಗ ಬಯಸುತ್ತಿರುವವರಿಗೆ ಸಿಹಿಸುದ್ದಿ. ಇದೀಗ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಪೋಸ್ಟ್ ಮ್ಯಾನ್, ಪೋಸ್ಟ್ ಗಾರ್ಡ್ ಸೇರಿದಿಂತೆ ಒಟ್ಟು 98 ಸಾವಿರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ, ಆಸಕ್ತರು ಇಂಡಿಯಾ ಪೋಸ್ಟ್ ಅಧಿಕೃತ ವೆಬ್‌ಸೈಟ್ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದು.

Indian Railway Recruitment 2022: 3,115 ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಅರ್ಜಿ ಸಲ್ಲಿಸಬಹುದು

10 ಮತ್ತು 12ನೇ ತಗರತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು

ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. 18 ವರ್ಷದಿಂದ 32 ವರ್ಷದೊಳಗಿನ , 10 ಮತ್ತು 12 ನೇ ತರಗತಿ ಪಾಸ್ ಆದವರು ಅರ್ಜಿಯನ್ನು ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 2022 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು ಮಾಹಿತಿ ನೀಡಲಾಗಿದೆ.

Post Man ಹುದ್ದೆಗಳು 59,099 , ಮಲ್ಟಿ-ಟಾಸ್ಕಿಂಗ್ ಹುದ್ದೆಗಳು 37,539, ಮೇಲ್‌ಗಾರ್ಡ್ 1445 ಹುದ್ದೆಗಳು ಖಾಲಿಯಿವೆ. 10 ನೇ ತರಗತಿ ಪಾಸಾಗಿರಬೇಕು ಮತ್ತು ಸ್ವಲ್ಪಮಟ್ಟಿನ ಕಂಪ್ಯೂಟರ್ ತಿಳಿದರಬೇಕು. ಇನ್ನು ಕೆಲವು ಹುದ್ದೆಗಳಿಗೆ 12 ನೇ ತರಗತಿ ಅಥವಾ ಪಿಯುಸಿ ಪಾಸಾಗಿರುವುದು ಕಡ್ಡಾಯವಾಗಿದೆ.

India Post Recruitment 2022: ಅರ್ಜಿ ತುಂಬುವುದು ಎಲ್ಲಿ ಮತ್ತು ಹೇಗೆ?

ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ indiapost.gov.in ತೆರಳಿ ಫಾರ್ಮ್ನಲ್ಲಿ ಕೇಳಿದ ಮಾಹಿತಿ ನೀಡಿ ನಿಗದಿ ಶುಲ್ಕ ಪಾವತಿಸಿ ರಿಜಿಸ್ಟರ್ ಮಾಡಿಕೊಳ್ಳಿ

ಉದ್ಯೋಗಾವಕಾಶದ ಕುರಿತು ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ . ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

land for sale

Back to top button