Focus News
Trending

ಗಮನಸೆಳೆದ ಪೌರಾಣಿಕ ಪ್ರಸಂಗ ಚಕ್ರಚಂಡಿಕೆ ಯಕ್ಷಗಾನ

ಕುಮಟಾ : ಶ್ರೀ ನಂದಿ ಹವ್ಯಾಸಿ ಕಲಾಬಳಗ, ಕಲ್ಲಬ್ಬೆ, ಇವರಿಂದ ಶರನ್ನವರಾತ್ರಿ ಪ್ರಯುಕ್ತ ಯಕ್ಷಗಾನ ಸೇವೆಯಾಟ ಇತ್ತೀಚೆಗೆ ಶ್ರೀ ನಂದಿಕೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು. ಪೌರಾಣಿಕ ಪ್ರಸಂಗವಾದ “ ಚಕ್ರ ಚಂಡಿಕೆ “ಯಲ್ಲಿ ಹಿಮ್ಮೇಳದಲ್ಲಿ ಗಣಪತಿ ಹೆಗಡೆ, ಅಳವಳ್ಳಿ ಹಾಗೂ ಕಲ್ಲಬ್ಬೆಯ ಯುವ ಭಾಗವತ ಗಜಾನನ ಹೆಗಡೆ. ಮೃದಂಗ ವಾದನದಲ್ಲಿ ಸುಬ್ರಹ್ಮಣ್ಯ ಭಟ್ಟ, ಬಾಡ. ಅನಂತ ಜೋಷಿ, ಚಂಡೆಯಲ್ಲಿ ರಾಮನ್ ಊರಕೇರಿ ಸಾಥ್ ನೀಡಿದರು.

ಪರೇಶ್ ಮೇಸ್ತಾದು ಹತ್ಯೆಯಲ್ಲ, ಆಕಸ್ಮಿಕ ಸಾವು: ವರದಿ ಸಲ್ಲಿಸಿದ ಸಿಬಿಐ

ಮುಮ್ಮೇಳದಲ್ಲಿ ಘಟೋತ್ಗಜನಾಗಿ ಶಿಕ್ಷಕ ವಿಷ್ಣು ಭಟ್ಟ, ಧರ್ಮರಾಯನಾಗಿ ಶಿಕ್ಷಕ ಮಹೇಶ ಭಟ್ಟ, ಭೀಮನಾಗಿ ಮಹೇಶ ಭಂಡಾರಿ, ಕಪಟ ಸಂನ್ಯಾಸಿಯಾಗಿ ಶ್ರೀಕಾಂತ ಹೆಗಡೆ, ಆನಗುಂಡಿ, ಬರ್ಬರೀಕನಾಗಿ ಸಾತ್ವಿಕಹೆಗಡೆ, ಕೃಷ್ಣನಾಗಿ ಭೂಷಣ ಜೋಷಿ, ವತ್ಸಲೆಯಾಗಿ ವಂದೂರಿನ ಪ್ರಸನ್ನ ಹೆಗಡೆ, ದೈತ್ಯ ವೇಷದಲ್ಲಿ ಮಾರ್ಷಲ್ ಫರ್ನಾಂಡೀಸ್, ಕಲಾ ಸೇವೆ ನಿರ್ವಹಿಸಿದರು. ಈ ಯಕ್ಷಗಾನ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಉಪಹಾರದ ಹಾಗೂ ಪಾನಕದ ವ್ಯವಸ್ಥೆಯನ್ನು ಕಾರ್ಯಕ್ರಮದ ಸಂಘಟಕರಾದ ಎಲ್, ಆರ್, ಹೆಗಡೆ. ಶಂಭುಮನೆ, ಪ್ರಾಯೋಜಕತ್ವ ವಹಿಸಿದ್ದರು. ಊಟೋಪಚಾರದ ತಯಾರಿಯನ್ನು ಹರೀಶ ಭಟ್ಟ, ಅಧ್ಯಾಹ್ನ ಸೇವೆಮಾಡಿ ಕೊಟ್ಟರು.

ಕಲ್ಲಬ್ಬೆ ಊರಿನ ಹವ್ಯಾಸಿ ಕಲಾವಿದರು ನಡೆಸಿದ ಈ ಯಕ್ಷಗಾನಕ್ಕೆ ಅನೇಕ ಜನರು ತನು-ಮನ-ಧನ ಸಹಾಯ ನೀಡಿದ್ದನ್ನು ಸ್ಮರಿಸಿಕೊಳ್ಳಲಾಯಿತು. ಆಗಮಿಸಿದ ಕಲಾಭಿಮಾನಿ ಹಾಗೂ ಕಲಾವಿದರನ್ನು ಚಿದಾನಂದ ಹೆಗಡೆ, ಕಲ್ಲಬ್ಬೆ ಸ್ವಾಗತಿಸಿದರು. ಲಕ್ಕಣ್ಣ ಶಂಭುಮನೆ, ತಮ್ಮ ಮನದಾಳದ ಮಾತುಗಳನ್ನಾಡಿದರು. ಯಕ್ಷಗಾನದ ಕೊನೆಯಲ್ಲಿ ಶಿಕ್ಷಕ ರಾಘವೇಂದ್ರ ಹೆಗಡೆ,ಕಲ್ಲಬ್ಬೆ. ಸರ್ವರನ್ನೂ ವಂದಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button