Important
Trending

KSRTC ಬಸ್ ಬ್ರೇಕ್ ಫೇಲ್: ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಗೆ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಆಟೋದಿಂದ ಹಾರಿ ಪ್ರಾಣ ಉಳಿಸಿಕೊಂಡ ರಿಕ್ಷಾ ಚಾಲಕರು

ಹೊನ್ನಾವರ: ಕೆ.ಎಸ್‌ಆರ್.ಟಿ.ಸಿ ಬಸ್ , ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾ ಜಖಂ ಆದ ಘಟನೆ ಹಡಿನಬಾಳ ಸಮೀಪ ಸಂಭವಿಸಿದೆ.ಹೊನ್ನಾವರದಿಂದ ಆರ್ಮುಡಿ ಹೋಗುತ್ತಿರುವ ಬಸ್ ಹಡಿನಬಾಳ ಮೂಲಕ ಗುಂಡಬಾಳ ಪ್ರವೇಶಿಸುವ ಮಹದ್ವಾರಪ್ರವೇಶಿಸುವಾಗ ಬ್ರೇಕ್ ಪೇಲ್ ಆಗಿದೆ.

ಮೃತಪಟ್ಟ ಹೆಂಡತಿಯ ಅಂತಿಮಕ್ರಿಯೆ ಮುಗಿಸಿ ಮರಳಿ ಮನೆಗೆ ಬರುವಷ್ಟರಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು: ನಗದು, ಚಿನ್ನಾಭರಣ ದೋಚಿ ಪರಾರಿ

ಈ ವೇಳೆ ಹಿಂಬದಿಗೆ ಇಳಿಮುಖವಾಗಿ ಒಮ್ಮೆಲೆ ಬಂದು ರಿಕ್ಷಾ ತಂಗುದಾನದಲ್ಲಿ ನಿಂತಿದ್ದ ಮೂರು ರಿಕ್ಷಾ ಡಿಕ್ಕಿಯಾಗಿ ಹಾನಿ ಸಂಭವಿಸಿದೆ. ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಕಡೆ ಬಸ್ ಬಂದು ನಿಂತಿದ್ದ ರಿಕ್ಷಾಗೆ ಡಿಕ್ಕಿಯಾಗಿರುವುದರಿಂದ ಜಖಂ ಆಗಿದೆ.

ಆಟೋದಿಂದ ಹಾರಿ ಪ್ರಾಣ ಉಳಿಸಿಕೊಂಡ ರಿಕ್ಷಾ ಚಾಲಕರು

ರಿಕ್ಷಾ ಚಾಲಕರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಆಟೋ ಚಾಲಕರು ಆಟೋದಿಂದ ಹಾರಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Related Articles

Back to top button