Important
Trending

ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು

ದಾಂಡೇಲಿ:ಕಾರ್ಮಿಕನೋರ್ವ ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ತಾಲೂಕಿನ ಕೆರವಾಡದಲ್ಲಿರುವ ಶ್ರೇಯಸ್ ಮತ್ತು ಶ್ರೀನಿಧಿ ಪೇಪರ್ ಮಿಲ್ ನಲ್ಲಿ ನಡೆದಿದೆ. ಬಸವೇಶ್ವರ ನಗರದ ಗಣೇಶ ವಿ. ವಾಳೆ ಎಂಬಾತನೇ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ. ಈತ ಎಂದಿನoತೆ ಕಂಪನಿಯ ಕೆಲಸಕ್ಕೆ ಹೋಗಿದ್ದ ವೇಳೆ ಕೆಲಸ ಮಾಡುತ್ತಿರುವಾಗಲೇ ಮೃತಪಟ್ಟಿದ್ದಾನೆ. ಗಣೇಶ ವಾಳೆ ಕಳೆದ ಹತ್ತು ಹದಿನೈದು ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button