Important
Trending

ತಾಯಿ ನೋಡಲು ಮನೆಗೆ ಬಂದ 10ನೇ ತರಗತಿ ವಿದ್ಯಾರ್ಥಿ ಸಾವಿಗೆ ಶರಣು: ತಂದೆ ಆರೋಪವೇನು?

ದಾಂಡೇಲಿ: ಮೊರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಮನೆಯಲ್ಲಿ ಸಾವಿಗೆ ಶರಣಾದ ಘಟನೆ ನಗರದ ನಿರ್ಮಲನಗರದ ಅಂಬೇವಾಡಿಯಲ್ಲಿ ನಡೆದಿದೆ. 16 ವರ್ಷದ ಅಬ್ದುಲ್ ರೆಹಮಾನ್ ಬಾರೆ ಇಮಾಮ್ ಚಪ್ಪರಬಂದ್ ಎಂಬಾತನೇ ನೇಣಿಗೆ ಶರಣಾದ ಬಾಲಕ ಎಂದು ತಿಳಿದುಬಂದಿದೆ. ಶಾಲೆಯಲ್ಲಿ ಓದುತ್ತಿದ್ದ ಬಾಲಕ ತನ್ನ ತಾಯಿಯನ್ನು ನೋಡಬೇಕೆಂದು ಬಯಸಿದ್ದರಿಂದ ತಂದೆಯ ಜೊತ ಮನೆಗೆ ಬಂದಿದ್ದ.

ಗಾಂಜಾ ಮಾರಾಟ: ಭಟ್ಕಳ ಮತ್ತು ಕುಮಟಾದಲ್ಲಿ ಮಾರಾಟ ಮಾಡುತ್ತಿದ್ದವರ ಆರೋಪಿಗಳ ಬಂಧನ

ಆದರೆ ಸಂಜೆ ಇದ್ದಕ್ಕಿದ್ದಂತೆ ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳದುಬಂದಿಲ್ಲ. ಆದರೆ, ಮೃತನ ವಸತಿ ಶಾಲೆಯಲ್ಲಿ ರ‍್ಯಾಗಿಂಗ್ ನಡೆಯುತ್ತಿದೆ. ಈ ಹಿಂದೆ ಕೂಡಾ ಶಾಲೆಯಲ್ಲಿ ರ‍್ಯಾಗಿಂಗ್ ನಡೆದಿತ್ತು. ಇದೇ ನನ್ನ ಮಗನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಸತ್ಯಾಂಶ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button