ಗಾಂಜಾ ಮಾರಾಟ: ಭಟ್ಕಳ ಮತ್ತು ಕುಮಟಾದಲ್ಲಿ ಮಾರಾಟ ಮಾಡುತ್ತಿದ್ದವರ ಆರೋಪಿಗಳ ಬಂಧನ

ಭಟ್ಕಳ : ಗುಳ್ಮಿ ಕ್ರಾಸ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಡಿವೈಎಸ್ಪಿ ನೇತೃತ್ವದದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನಡೆದಿದೆ. ಬಂಧಿತ ಆರೋಪಿ ಸಯ್ಯದ್ ಮುಸಾ ಸಯ್ಯದ್ ಅಹ್ಮದ್ ತಲಾಹಸ್ಟ್ರೀಟ್ ಹನಿಫಾಬಾದ್ ಹೆಬಳೆ ನಿವಾಸಿ ಎಂದು ತಿಳಿದು ಬಂದಿದೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದ ಕಾರು: ಚಾಲಕ ಸ್ಥಳದಲ್ಲೇ ಸಾವು: ಮೂವರಿಗೆ ಗಾಯ

ಈತ ಅಕ್ರಮವಾಗಿ ಒಟ್ಟು ಸುಮಾರು 2,500 ರೂಪಾಯಿ ಬೆಲೆಬಾಳುವ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ನಗದು ಹಣ 200 ರೂಪಾಯಿ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾದಲ್ಲಿ ಗಾಂಜಾ ಮಾರಾಟಗಾರನ ಬಂಧನ

ಕುಮಟಾ: ಇಲ್ಲಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಓರಿಸ್ಸಾ ಮೂಲದ ರಾಕೇಶಕುಮಾರ ದಾಸ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬಂಧಿತನಿoದ ಸುಮಾರು ಒಂದುವರೆ ಕೆ.ಜಿ ಗಾಂಜಾ ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

land for sale
Exit mobile version