Big NewsImportant
Trending

ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಭಟ್ಕಳ : ತಾಲೂಕಿನ ನೂಜ್ ಕೆಕ್ಕೋಡಿನಲ್ಲಿ ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು ಗಾಯಗೊಂಡ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ ದುರ್ಗು ಮರಾಠಿ(37) ಚಿರತೆಯ ದಾಳಿಗೆ ಒಳಗಾದ ವ್ಯಕ್ತಿ. ಇವರು ತಮ್ಮ ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದುರ್ಗು ಮರಾಠಿ ಅವರ ಕೈ ಗಾಯಗೊಳಿಸಿದೆ. ವ್ಯಕ್ತಿಯು ಚಿರಿ ಕೊಂಡಿದ್ದು ಜನರು ಬರುತ್ತಿರುವಂತೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.

40 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ: ಉಚಿತವಾಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಸದ್ಯ ವ್ಯಕ್ತಿ ಚಿರತೆಯ ದಾಳಿಯಿಂದ ಪಾರಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿರತೆಯ ದಾಳಿಯಿಂದ ನೂಜ್ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು ಇಷ್ಟು ದಿನ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ವನ್ಯ ಜೀವಿಗಳು ಮಾನವನ ಮೇಲೆ ಪ್ರಾಣಾಂತಿಕ ದಾಳಿ ಮಾಡಲು ಆರಂಭಿಸಿದೆ. ಕೂಡಲೆ ಅರಣ್ಯ ಇಲಾಖೆ ನಿಗಾವಹಿಸಬೇಕು. ಗ್ರಾಮಕ್ಕೆ ಬರುವ ಮೃಗಗಳನ್ನು ಸೆರೆ ಹಿಡಿದು ದೂರಬಿಡಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆರ್‌ಎಫ್‌ಒ ಶರತ್ ಶೆಟ್ಟಿ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button