ಕಾರವಾರ: ನಗರದ ರಸ್ತೆ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ಅತ್ಯಗತ್ಯವಾಗಿದೆ. ಚರಂಡಿ ಸರಿಯಾಗಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೃತಕ ಪ್ರವಾಹ ಉಂಟಾಗಬಹುದು. ಅದಕ್ಕಾಗಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಅವಶ್ಯಕವಾಗಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಹೇಳಿದರು.
ನಗರದ ಪದ್ಮನಾಭನಗರದ ಶನೈಶ್ಚರ ದೇವಸ್ಥಾನ ವಾರ್ಡ್ ನಂ. 19, ವಾರ್ಡ್ ನಂ. 21ರ ಕುಲಕೋಟೆಶ್ವರ ದೇವಸ್ಥಾನ ಹಾಗೂ ವಾರ್ಡ್ ನಂ. 26ರಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣವಾಗುತ್ತಿವೆ. ಆದರೆ, ಅದರ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಜಾಗವಿಲ್ಲದಾಗಿದೆ. ಇದರಿಂದಾಗಿ ಮಳೆ ನೀರೆಲ್ಲ ರಸ್ತೆಯ ಮೂಲಕವೇ ಹರಿಯುತ್ತಿದೆ. ಹೀಗಾಗಿ ರಸ್ತೆ ಪಕ್ಕದಲ್ಲಿ ಮನೆ ಕಟ್ಟುವವರು ಚರಂಡಿ ನಿರ್ಮಾಣಕ್ಕೆ ಜಾಗಬಿಟ್ಟು ಕಾಂಪೌಂಡ್‌ಗಳನ್ನು ನಿರ್ಮಿಸಬೇಕು. ಇದರಿಂದ ರಸ್ತೆಯಲ್ಲಿ ನಿಲ್ಲುವ ನೀರು ಚರಂಡಿ ಮೂಲಕ ಹರಿಯಲು ಸಾಧ್ಯವಾಗುತ್ತದೆ ಎಂದರು.
ಪ್ರವಾಹ ಹಾಗೂ ಕೋವಿಡ್ ಕಾರಣಕ್ಕೆ ಕಾಮಗಾರಿಗಳು ವಿಳಂಬವಾಗುತ್ತಿವೆ. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದೇವೆ. ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಗುಣಮಟ್ಟವನ್ನು ಪರಿಶೀಲಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಾಲಾ ಹುಲಸ್ವಾರ, ಹನುಮಂತ ತಳವಾರ, ರೇಷ್ಮಾ ಮಾಳ್ಸೆಕರ್, ರವಿರಾಜ ಅಂಕೋಲೆಕರ, ನಾಗೇಶ್ ಕೇಣಿ, ಶಿಲ್ಪಾ ನಾಯ್ಕ, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ್, ಯುವ ಮೋರ್ಚಾ ಅಧ್ಯಕ್ಷರಾದ ಶುಭಂ ಕಳಸ, ನಗರಸಭೆ ಇಂಜಿನಿಯರ್ ಆರ್.ಪಿ.ನಾಯ್ಕ, ಸ್ಥಳೀಯರಾದ ದೇವಿದಾಸ ಕಂತ್ರಿಕರ್, ಸಂದೇಶ ಬಾಡ್ಕರ್, ಸಾರ್ವಜನಿಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇಂದಿನ ಪ್ರಮುಖ ಸುದ್ದಿಗಳು
- ವಿಸ್ಮಯ ಟಿ.ವಿ ಫಲಶೃತಿ: ಹೆದ್ದಾರಿಯಲ್ಲಿ ಹೊಂಡ ಗುಂಡಿ ಮುಚ್ಚುವ ಕಾರ್ಯ ಆರಂಭ
- ಅನಂತ್ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ!
- ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ
- ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?
- ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment