Focus NewsImportant
Trending

ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶಮುಂಡಳ್ಳಿ ಸಂಯೋಜನೆಯಲ್ಲಿನ ಕಂಚಿನ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿ ಗೀತೆ ಧ್ವನಿಸುರುಳಿ ಬಿಡುಗಡೆ 

ಭಟ್ಕಳ- ತಾಲ್ಲೂಕಿನ ಗುಡಿಹಿತ್ತಲಿನಲ್ಲಿ ಆಯೋಜನೆಗೊಂಡ ಇಪ್ಪತೈದನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಾಯಕ ಉಮೇಶ ಮುಂಡಳ್ಳಿ ಸ್ವರಸಂಯೋಜನೆ ಮಾಡಿ ಹಾಡಿರುವ ಭಕ್ತಿ ಗಾನ ಮಾಲಾ   ಶ್ರೀ ಕಂಚಿನ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿ ಗೀತೆ ಧ್ವನಿಸುರುಳಿ ಬಿಡುಗಡೆಗೊಂಡಿತು. ಗಣೇಶ ನಾಯ್ಕ ಗುಡಿಹಿತ್ತಲು ಹಾಗೂ ಉಮೇಶ ಮುಂಡಳ್ಳಿ ಸಾಹಿತ್ಯ ಇರುವ ಧ್ವನಿಸುರುಳಿ ಯನ್ನು ಭಟ್ಕಳ ಶಾಸಕ ಸುನೀಲ್ ನಾಯ್ಕ ಬಿಡುಗಡೆಗೊಳಿಸಿದರು.

ನಸುಕಿನ ಜಾವ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕದ್ದು 8 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ| ಕಳ್ಳನನ್ನು ಹಿಡಿಯಲು ಹೋಗಿ ರೈಲಿನಿಂದ ಕೆಳಗೆ ಬಿದ್ದ ಮಹಿಳೆ

ಅಮ್ಮನವರ ಕ್ಷೇತ್ರ ಮಹಿಮೆ ತಾಯಿಯ ಸೇವೆ ನಾಮಾವಳಿಯನ್ನು ಸಾರುವ ಭಕ್ತಿ ಪ್ರಧಾನ ಗೀತೆಯ ಬಗ್ಗೆ ಶಾಸಕರು ಮೆಚ್ವುಗೆ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಭಟ್ಕಳ ಉಪವಿಭಾಗ ಅಧಿಕಾರಿ ಮಮತಾ ದೇವಿ, ಸಮಾಜ ಸೇವಕ ಹಾಗೂ ಸತ್ಯಸಾಯಿ ಸೇವಾ ಸಮಿತಿ ಉತ್ತರ ಕನ್ನಡ ಇದರ ಸಂಚಾಲಕ ಆರ್ ಭಾಸ್ಕರ ನಾಯ್ಕ, ಶಿರಾಲಿ ಪಂಚಾಯತ್ ಅಧ್ಯಕ್ಷೆ ರೇವತಿ ನಾಯ್ಕ , ಭಟ್ಕಳ ಹೆಸ್ಕಾಂ ಅಧಿಕಾರಿ ಶಿವಾನಂದ ನಾಯ್ಕ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಗಣೇಶ ನಾಯ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಶಂಕರ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. 

ಭಕ್ತಿಗೀತೆಗೆ ವಿನಾಯಕ ದೇವಾಡಿಗ ವಾಧ್ಯ ಸಂಯೋಜನೆ ಮತ್ತು ಕೊಳಲು ನುಡಿಸಿದ್ದು, ಕೀಬೋರ್ಡ್ ನವೀನ್ ಶೇಟ್ ಹಾಗೂ ತಬಲ ಹರೀಶ್ ಶೇಟ್ ಧಾರೇಶ್ವರ ನುಡಿಸಿರುತ್ತಾರೆ. ಕುಮಾರಿ  ಶೃದ್ಧಾ ಖಾರ್ವಿ ಕೂಡ ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಕಾರ್ಯಕ್ರಮವನ್ನು ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು.

ವಿಸ್ಮಯ ನ್ಯೂಸ್, ಭಟ್ಕಳ

Related Articles

Back to top button