Important
Trending

ಮುಖ ಕವಚ ಧರಿಸಿ ಗ್ಯಾರೇಜ್ ಶಟರ್ ಮುರಿದು ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾಗಿದೆ ದೃಶ್ಯ

ಭಟ್ಕಳ: ಕಪ್ಪುಬಣ್ಣದ ಪ್ಲಾಸ್ಟಿಕ್ ಮುಖ ಕವಚ ಧರಿಸಿದ ಕಳ್ಳರಿಬ್ಬರು ಗ್ಯಾರೇಜ್ ಶಟರ್ ಮುರಿದು ನಗದು ಹಾಗೂ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಮಣ್ಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವಾನಂದ ಗ್ಯಾರೇಜ್ ನಲ್ಲಿ ನಡೆದಿದೆ, ಸುಮಾರು ಒಂದು ಲಕ್ಷದ ನಲವತ್ತು ಸಾವಿರ ನಗದು ಹಾಗು ಮೊಬೈಲ್ ಪೋನ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಜಾನೆ ಗ್ಯಾರೇಜ್ ಬಳಿ ಬಂದು ನೋಡಿದಾಗ ಕಳ್ಳತನ ಆಗಿರುವುದು ತಿಳಿದಿದ್ದು, ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಮಧ್ಯಾಹ್ನ ವೇಳೆಗೆ ಕಾರವಾರದಿಂದ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸೋಮನಾಥ ರಾಠೋಡ ತನಿಖೆ ಕೈಗೊಂಡಿದ್ದಾರೆ. ಮಣ್ಕುಳಿಯ ಶಂಕರ ಶೆಟ್ಟಿ ಮಾಲೀಕತ್ವದ ಗ್ಯಾರೇಜ್ ನಲ್ಲಿ ಈ ಕಳ್ಳತನ ನಡೆದಿದೆ,

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button