Follow Us On

WhatsApp Group
Important
Trending

ಪವರ್ ಸ್ಟಾರ್ ಜೊತೆ ಹಾಟ್ ಸೀಟ್ ನಲ್ಲಿ ಕುಳಿತ ಗಣಪತಿ: ಗಮನಸೆಳೆದ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯ ವಿನಾಯಕ

ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಇದೀಗ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನಡದ ಕೋಟ್ಯಧಿಪತಿ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದೆ. ಹೌದು, ಅವರ್ಸಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಡುತ್ತಿದ್ದ ಕೋಟ್ಯಧಿಪತಿ ಮಾದರಿಯಲ್ಲಿಯೇ ಗಣಪತಿಯ ಮೂರ್ತಿಯನ್ನು ರಚಿಸಿ ವಿಭಿನ್ನವಾಗಿ ಸ್ಮರಿಸಿದೆ.

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡ ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು

ವಿಶೇಷ ಅಂದ್ರೆ, ಹಾಟ್ ಸೀಟಿನಲ್ಲಿ ಗಣಪತಿ ಕುಳಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿರುವಂತೆಯೇ ಇದೆ. ಈ ಗಣಪನನ್ನ ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಕುಮ್ಮಣ್ಣ ಮೇತ್ರಿ ಮನೆತನದ ದಿನೇಶ ಮೇತ್ರಿ ಇದನ್ನು ರಚಿಸಿದ್ದಾರೆ. ಒಟ್ಟನಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯ ವಿನಾಯಕ ಎಲ್ಲರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button