Big News
Trending

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತಾ ಗೌರವ: ನಿವೃತ್ತ ಯೋಧರಿಗೆ ಸಂದಿತು ಅಭಿಮಾನಪೂರ್ವಕ ಸನ್ಮಾನ

ಶಿರಸಿ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ ಶಿರಸಿ ಇವರ ವತಿಯಿಂದ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತಾ ಗೌರವ ಮತ್ತು ನಿವೃತ್ತ ಯೋಧರಿಗೆ ಅಭಿಮಾನಪೂರ್ವಕ ಸನ್ಮಾನ ಕಾರ್ಯಕ್ರಮವನ್ನು ಶಿರಸಿ ತಾಲೂಕಿನ ಶ್ರೀ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿಯ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾದ ಕಾಶಿನಾಥ ಮೂಡಿ ಅವರು ದೀಪ ಬೆಳಗುವ ಮೂಲಕ ನೆರವೇರಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರೆಲ್ಲರೂ ಒಗ್ಗೂಡಿ ನೂರಾರು ನಿವೃತ್ತ ಸೈನಿಕರನ್ನು ಹಾಗೂ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾದ ಕಾಶಿನಾಥ ಮೂಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೋರಾಟಗಾರನಾದ ನನ್ನನ್ನು ಹಾಗೂ ನಿವೃತ್ತ ಯೋಧರನ್ನು ಗುರಿತಿಸಿ ಸನ್ಮಾನ ಮಾಡಿರುವ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವಾತಂತ್ರö್ಯ ಪೂರ್ವದಲ್ಲಿನ ಅನೇಕ ಸಂಗತಿಗಳನ್ನು, ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಬ್ರೀಟಿಷರಿಂದ ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕಿದರು.

ಈ ವೇಳೆ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಯಲ್ಲಾಪುರದ ಸಹಾಯಕ ಕಾರ್ಯನಿರ್ವಾಹಣ ಇಂಜಿನಿಯರ ವಿ.ಎಂ ಭಟ್ ಅವರು ಮಾತನಾಡಿ, ಸಮಾಜದಲ್ಲಿನ ಅಗತ್ಯತೆಗಳನ್ನು ಹುಡುಕಿ ಹುಡುಕಿ ತಮ್ಮ ಸೇವೆಯನ್ನು ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಅನಂತಮೂರ್ತಿ ಹೆಗಡೆ ಅವರ ಕಾರ್ಯ ಶ್ಲಾಘನೀಯವಾದುದು. ಈ ಟ್ರಸ್ಟಿನ ಮೂಲಕ ಇನ್ನಷ್ಟು ಸೇವೆಗಳು ಸಮಾಜಕ್ಕೆ ದೋರೆಯುವಂತಾಗಲಿ ಎಂದರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ ಶಿರಸಿ ಇದರ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆ ಅವರು ಮಾತನಾಡಿ. ದೇಶ ಸೇವೆಯನ್ನು ನೀವೆಲ್ಲಾ ಮಾಡಿದ್ದು, ನಿಮ್ಮ ಸೇವೆಯನ್ನು ನಾನು ಮಾಡಬೇಕೆಂಬ ಸದುದ್ಧೇಶದಿಂದ ಈ ಒಂದು ಕಾರ್ಯಕ್ರಮವನ್ನು ಆvಯೋಜಿಸಿದ್ದೆವೆ. ನಿವೃತ್ತಿಯಾದ ಬಳಿಕ ಸೈನಿಕರಿಗೆ ಸಿಗುವ ಕೆಲ ಸೌಲಭ್ಯಗಳು ದೊರೆಯಲು ವಿಳಂಬವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆ ಕುರಿತಾಗಿಯೂ ಮುಂದಿನ ದಿಗಳಲ್ಲಿ ಗಮನ ಹರಿಸುತ್ತೆವೆ ಎಂದರು.

ಈ ಸಂದರ್ಬದಲ್ಲಿ ಶಿರಸಿ ತಹಶೀಲ್ಧಾರರು ಹಾಗೂ ತಾಲೂಕು ಧಂಡಾದಿಕಾರಿಗಳಾದ ಶ್ರೀಧರ ಮುಂದಲಮನಿ, ವಿಭಾಗೀಯ ಅರಣ್ಯಾಧಿಕಾರಿಗಳಾದ ಅಜ್ಜಯ್ಯ ಜಿ.ಆರ್, ಚಿಂತಕರು ಮತ್ತು ಸಾಹಿತಿಗಳಾದ ಶಿವಾನಂದ ಕಳವೆ, ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ ನಾಯ್ಕ, ಪ್ರಮುಖರಾದ ಜಿ.ಎಮ್ ಮುಳಕಂಡ, ಗಣಪತಿ ಭಟ್, ಮುಂತಾದವರು ಸೇರಿದಂತೆ ನಿವೃತ್ತ ಯೋದರು, ಯೋಧರ ಕುಟುಂಬಸ್ಥರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button