Focus News
Trending

“ನನ್ನ ಶಾಲೆ ನನ್ನ ಕೊಡುಗೆ” ಅಭಿಯಾನ: 75 ಸಾವಿರಕ್ಕೂ ಹೆಚ್ಚಿನ ಮೊತ್ತದ ಸಾಮಗ್ರಿ ಶಾಲೆಗೆ ದೇಣಿಗೆ

ಅಂಕೋಲಾ : “ನನ್ನ ಶಾಲೆ ನನ್ನ ಕೊಡುಗೆ” ಅಭಿಯಾನದ ಮೂಲಕ ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಶೈಕ್ಷಣಿಕ ಅವಶ್ಯಕವಾದ ಸಾಮಗ್ರಿಗಳನ್ನು ಶಾಲೆಗಾಗಿ ಹಳೆ ವಿದ್ಯಾರ್ಥಿಗಳು, ಊರ ನಾಗರೀಕರು ಸೇರಿ ಸುಮಾರು 75,000 ಕ್ಕೂ ಹೆಚ್ಚಿನ ಮೊತ್ತದ ಸಾಮಗ್ರಿಗಳನ್ನು ಶಾಲೆಗೆ ದೇಣಿಗೆಯಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಂಕೋಲಾ ತಾಲೂಕಿನಿಂದ ಸರಿ ಸುಮಾರು 40ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕ ಊರು ತಿಂಗಳ ಬೈಲ್. ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಶಾಲೆಗೆ ಈ ಎಲ್ಲಾ ವಸ್ತುಗಳನ್ನು ಹಸ್ತಾಂತರಿಸಲಾಯಿತು.

ದಾನಿಗಳ ವಿವರ ಹೀಗಿದೆ:

1) ಲಕ್ಷ್ಮೀ ವಿ ಪಟಗಾರ , ತಿಂಗಳಬೈಲ ಕೊಡುಗೆ…ಬಟ್ಟಲು ಲೋಟಾ ( 25 set)
2) ಪ್ರವೀಣ ನಾಯ್ಕ .ತಿಂಗಳಬೈಲ (30..ಛತ್ರಿ)
3)ವಿನಾಯಕ ಪಟಗಾರ( ಗಜು ಮಾಸ್ತರ)
ತಿಂಗಳಬೈಲ…5 ಡೆಸ್ಕ್ 5 ಬೇಂಚ
4)ಜಗದೀಶ ಹರಿಕಾಂತ SDMC ಅದ್ಯಕ್ಷರ ತಿಂಗಳಬೈಲ ಕಪಾಟು
5)ಪ್ರಸನ್ನ ಭಟ ..ತಿಂಗಳಬೈಲ , ನಲಿಕಲಿ ..ಸ್ಮಾರ್ಟ ಕ್ಲಾಸ್
3 ಟೇಬಲ್ 12 ಖುರ್ಚಿ
6)ಹರಿಹರ ನಾಯ್ಕ ಮಿಲಿಟರಿ, ತಿಂಗಳಬೈಲ, 15 ಮಹಾಪುರುಷರ ಪೋಟೊ
7)ನಾಗರತ್ನ ನಾಯಕ ..ಮೂಲೆಗದ್ದೆ.. ತಿಂಗಳಬೈಲ.ಸ್ಪೀಕಿಂಗ್ ಸ್ಟಾಂಡ್(ಡಯಸ್)
8)ಗಜಾನನ ನಾಯ್ಕ ಹಳೆಮನೆ ತಿಂಗಳಬೈಲ.. ಟೈ ,ID CARD,ಬೆಲ್ಟ
9)ರಾಘವೇಂದ್ರ ಬಾಂದೇಕರ .ತಿಂಗಳಬೈಲ, ಎರಡು(2)ಗೋಡೆ ಗಡಿಯಾರ
10)ಗುರು ನಾಯಕ ( ರಾಯ ಶೆಟ್ಟಿ ಗದ್ದೆ)…25 ಖುರ್ಚಿ.

ಈ ಸಂದರ್ಭದಲ್ಲೀ ದಾನಿಗಳಲ್ಲಿ ಪ್ರಮುಖರಾದ ಶ್ರೀ ಪ್ರಸನ್ನ ಟಿ ಭಟ್ ಅವರು ಮಾತನಾಡಿ ಶಾಲೆ ಮತ್ತು ಸಮುದಾಯದ ಮಧ್ಯ ಒಳ್ಳೆಯ ಸಂಬಂಧ ಇದ್ದಾಗ ಮಾತ್ರ ಈ ರೀತಿ ದೇಣಿಗೆ ನೀಡಲು ಸಾಧ್ಯ. ನಮ್ಮ ಶಾಲೆಯಲ್ಲಿರುವ ಶಿಕ್ಷಕರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮಕ್ಕಳಿಗೆ ಚಿಕ್ಕಂದದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಿದ್ದಾಗ ಮಾತ್ರ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು .

ಹಳೆಯ ವಿದ್ಯಾರ್ಥಿಗಳಾದ ಉದಯ ನಾಯ್ಕ ಮಾತನಾಡಿ ನಮ್ಮ ಉರಿನ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಶಾಲೆ ಮೇಲಿನ ಅಭಿಮಾನದಿಂದ ಇಷ್ಟೊಂದು ವಸ್ತು ನೀಡಿರುತ್ತಾರೆ. ನಾವು ಯುವಕರೆಲ್ಲ ಸೇರಿ ನಮ್ಮದೇ ಚಿಕ್ಕ ಅಳಿಲು ಸೇವೆಯನ್ನು ಶಾಲೆಗಾಗಿ ಮಾಡೋಣ ಎಂದು ಎಲ್ಲರಿಗೂ ಕರೆಕೊಟ್ಟರು.

ವಿಸ್ಮಯ ನ್ಯೂಸ್, ಅಂಕೋಲಾ

Back to top button