Big News
Trending

ದೇವಿಗೆ ತೋಡಿಸುವ 30 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ

ಗರ್ಭಗುಡಿಯ ಬಾಗಿಲು ಮುರಿಯದೆ ಗರ್ಭಗುಡಿಯ ಪೆಟ್ಟಿಗೆಯಲ್ಲಿದ್ದ ಆಭರಣ ಕಳುವು?
ಈ ಹಿಂದೆ ಪೂಜೆ ಮಾಡುತ್ತಿದ್ದ ಅರ್ಚಕನ ಮೇಲೆ ಕಳ್ಳತನದ ಶಂಕೆ?

[sliders_pack id=”1487″]

ಭಟ್ಕಳ: ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ದೇವರ ಲಕ್ಷಾಂತರ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಬಂದ ಕಾಣಿಕೆ ಮತ್ತು ಹರಕೆ ರೂಪದಲ್ಲಿ ಬಂದoತಹ ಚಿನ್ನಾಭರಣಗಳನ್ನು ದಿನಾಂಕ ಸೆಪ್ಟೆಂಬರ್ 15 ರಿಂದ ದೇವಿಯ ಚಿನ್ನಾಭರಣಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ ನರಸಿಂಹ ಭಟ್ಟ ಇವರಿಗೆ ನಿರ್ವಹಣೆ ಮಾಡಲು ಕೊಡಲಾಗಿತ್ತು.


ಅವುಗಳನ್ನು ದೇವಿಯ ಗರ್ಭಗುಡಿಯಲ್ಲಿ ಅಲ್ಯೂಮಿನಿಯಂ ಬಾಕ್ಸ್ ನಲ್ಲಿಟ್ಟು ಬೀಗ ಹಾಕಿದ್ದು, ನವರಾತ್ರಿಯ ಮೊದಲನೇ ದಿನ ಬೆಳಿಗ್ಗೆ ದೇವಸ್ಥಾನದ ಅರ್ಚಕರು ದೇವಿಗೆ ಚಿನ್ನದ ಆಭರಣ ತೊಡಿಸುವ ಸಂಧರ್ಭದಲ್ಲಿ ಆಭರಣ ಪೆಟ್ಟಿಗೆಯ ಕೀ ಹುಡುಕಾಡಿದಾಗ ಕೀ ಸಿಗದ ಕಾರಣ ಇತರೆ ಅರ್ಚಕರಲ್ಲಿ ವಿಚಾರಿಸಿದ್ದು, ಅವರು ತಮಗೆ ಮಾಹಿತಿ ಇಲ್ಲಾ ಎಂದು ತಿಳಿಸಿದ್ದಾರೆ. ಈ ಹಿಂದೆ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಸತೀಶ ರಾಮಚಂದ್ರ ಭಟ್ ಇವರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ.


ದೇವಿಯ ಮಧ್ಯಾಹ್ನದ ಪೂಜೆಯ ಅಲಂಕಾರಕ್ಕೆ ಚಿನ್ನಾಭರಣ ಅಗತ್ಯವಿದ್ದರಿಂದ ಅಲ್ಯೂಮಿನಿಯಂ ಬಾಕ್ಸ್ ಒಡೆದು ನೋಡಿದಾಗ ಬಾಕ್ಸ್ ನಲ್ಲಿದ್ದ 670 ಗ್ರಾಂ ತೂಕದ ಚಿನ್ನಾಭರಣ ಹಾಗೂ 225 ಗ್ರಾಂ ತೂಕದ ಬೆಳ್ಳಿ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಇವುಗಳ ಮೌಲ್ಯ ಅಂದಾಜು 30 ಲಕ್ಷ ಎಂದು ಅಂದಾಜಿಸಲಾಗಿದೆ.

ಆಡಳಿತ ಮಂಡಳಿಯ ನಿಷ್ಕಾಳಜಿ?

ಈ ದೇವಸ್ಥಾನದ ಚಿನ್ನಾಭರಣ ಸುರಕ್ಷಿತವಾಗಿಡಲು 20 ವರ್ಷದಿಂದ ಬ್ಯಾಂಕ್ ಒಂದರಲ್ಲಿ ಭದ್ರತೆ ಲಾಕರ್ ತೆರೆದಿದ್ದು, ಕಳೆದ ವರ್ಷ ಸೆಪ್ಟೆಂಬರನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಬದಲಾವಣೆ ಸಂದರ್ಭದಲ್ಲಿ ಹಿಂದೆ ಇದ್ದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಚಿನ್ನಾಭರಣ ಹಸ್ತಾಂತರ ಮಾಡಿದ್ದರು. ಅಲ್ಲಿಂದ ಇಲ್ಲಿಯ ತನಕ ಚಿನ್ನಾಭರಣವನ್ನು ಬ್ಯಾಂಕ್ ಭದ್ರತೆ ಲಾಕರ್ ನಲ್ಲಿ ಇಡದೆ ದೇವಸ್ಥಾನದ ಗರ್ಭಗುಡಿಯಲ್ಲಿ ಅಲ್ಯೂಮಿನಿಯಂ ಬಾಕ್ಸ್ ಇರಿಸಿದ್ದು ನೂತನ ಆಡಳಿತ ಮಂಡಳಿಯ ಈ ನಿಷ್ಕಾಳಜಿ ತನಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪೂಜೆ ಮಾಡುತ್ತಿದ್ದ ಅರ್ಚಕನ ಮೇಲೆ ಕಳ್ಳತನದ ಶಂಕೆ?

ಹಲವಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿದ್ದ ಮೂಲ ಅರ್ಚಕರು ತಮ್ಮ ಸಹಾಯಕ್ಕಾಗಿ ಓರ್ವ ಯಲ್ಲಾಪುರ ಮೂಲದ ಅರ್ಚಕರೋರ್ವರನ್ನು ನೇಮಿಸಿಕೊಂಡಿದ್ದರು. ಆದರೆ ಈತ ಕಳೆದ ಗಣೇಶ ಚತುರ್ಥಿಗೆ ಬಂದು ಹೋದವರು ಇನ್ನು ತನಕ ಭಟ್ಕಳಕ್ಕೆ ಮರಳಿ ಬಂದಿಲ್ಲವಾಗಿದ್ದು ಸಾರ್ವಜನಿಕರು ಹಾಗೂ ಭಕ್ತಾದಿಗಳು ಈ ಸಹಾಯಕ ಅರ್ಚರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.


ಈ ಒಂದು ವರ್ಷದ ಅವಧಿಯಲ್ಲಿ ಈ ಚಿನ್ನಾಭರಣ ಯಾವಾಗ ಕಳುವಾಗಿದೆ ಎಂದು ನಿಖರವಾದ ಮಾಹಿತಿ ಇಲ್ಲವಾಗಿದ್ದು , ಗರ್ಭ ಗುಡಿಯ ಬಾಗಿಲನ್ನು ಮುರಿಯದೇ ಚಿನ್ನಾಭರಣ ನಾಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹೇಮಂತ ದುರ್ಗಪ್ಪ ಮೊಗೇರ ಭಾನವಾರ ರಾತ್ರಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು ದೂರು ದಾಖಲಿಸಿಕೊಂಡ ಠಾಣೆಯ ಪಿ.ಎಸ್.ಐ ಎಚ್ ಓಂಕಾರಪ್ಪ ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಚಿನ್ನಾಭರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button