Focus News
Trending

ಉತ್ತರಕನ್ನಡದಲ್ಲಿ ಇಂದು 48 ಕರೊನಾ ಕೇಸ್: 119 ಮಂದಿ ಗುಣಮುಖ

ಜಿಲ್ಲೆಯಲ್ಲಿಂದು ಇಬ್ಬರ ಸಾವು
119 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 48 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 11, ಅಂಕೋಲಾ 0, ಕುಮಟಾ 4, ಹೊನ್ನಾವರ 5, ಭಟ್ಕಳ 1, ಶಿರಸಿ 19, ಸಿದ್ದಾಪುರ 5, ಮುಂಡಗೋಡ 1, ಹಳಿಯಾಳ 2 ಕೇಸ್ ದಾಖಲಾಗಿದೆ.

ಇದೇ ವೇಳೆ ಇಂದು 119 ಮಂದಿ ಗುಣಮುಖರಾಗಿದ್ದಾರೆ ಕಾರವಾರ 13 ಅಂಕೋಲಾ 02, ಕುಮಟಾ 39, ಹೊನ್ನಾವರ 17, ಭಟ್ಕಳ 24, ಶಿರಸಿ 12, ಮುಂಡಗೋಡು 1, ಹಳಿಯಾಳ 8 ಸೇರಿ 119 ಮಂದಿ ಗುಣಮುಖರಾಗಿದ್ದಾರೆ.

ಕಾರವಾರ ಮತ್ತು ಕುಮಟಾದಲ್ಲಿ ತಲಾ ಒಂದು ಸಾವಿನ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 159 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಕ್ಯೆ 12018ಕ್ಕೆ ಏರಿಕೆಯಾಗಿದೆ. 548 ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 10654 ಮಂದಿ ಗುಣಮುಖರಾಗಿದ್ದಾರೆ.

ಅಂಕೋಲಾ ಇಂದಿನ ವಿವರ

ಅಂಕೋಲಾದಲ್ಲಿ ಇಂದು ಒಂದು ಕರೊನಾ ಕೇಸ್ ದಾಖಲಾಗಿದೆ. ಆಂದ್ಲೆಯ 48 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಸಕ್ರೀಯ 67 ಪ್ರಕರಣಗಳಿದ್ದರೆ, 2 ಮಂದಿ ಗುಣಮುಖರಾಗಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button