ಮಾಹಿತಿ
Trending

ಕುಮಟಾದಲ್ಲಿ 21, ಹೊನ್ನಾವರದಲ್ಲಿ 7 ಕರೊನಾ ಕೇಸ್

ಕುಮಟಾದಲ್ಲಿ ಸೋಂಕಿತರ ಸಂಖ್ಯೆ 1606ಕ್ಕೆ ಏರಿಕೆ
ಹೊನ್ನಾವರ ತಾಲೂಕಿನಲ್ಲಿ ಇಂದು ಐವರು ಬಿಡುಗಡೆ

ಕುಮಟಾ: ತಾಲೂಕಿನಲ್ಲಿ ಇಂದು 22 ಕರೊನಾ ಕೇಸ್ ದಾಖಲಾಗಿದೆ. ತಾಲೂಕಿನ ತಾರಮಕ್ಕಿ, ದೇವರಹಕ್ಕಲ, ಬೆಲೆಹಿತ್ಲ, ಗೋಕರ್ಣ, ಮಚಗೋಣ, ಹಿರೆಗುತ್ತಿ, ಗುಂದಾ, ಚಿತ್ರಗಿ, ಕುಜಳ್ಳಿ, ತದಡಿ, ಮಾದರಿರಸ್ತೆ ಸೇರಿದಂತೆ ಹವಲೆಡೆ ಸೋಂಕು ಪತ್ತೆಯಾಗಿದೆ.

ಗೋಕರ್ಣದ 31 ವರ್ಷದ ಪುರುಷ, 21 ವರ್ಷದ ಪುರುಷ, 58 ವರ್ಷದ ಪುರುಷ, ಕೋಟಿತೀರ್ಥದ 47 ವರ್ಷದ ಪುರುಷ, 69 ವರ್ಷದ ವೃದ್ದ, ತಾರಮಕ್ಕಿಯ 11 ವರ್ಷದ ಬಾಲಕ, 37 ವರ್ಷದ ಪುರುಷ, ದೇವರಹಕ್ಕಲದ 32 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಬೇಲೆಹಿತ್ಲದ 50 ವರ್ಷದ ಪುರುಷ, 25 ವರ್ಷದ ಯುವತಿ, ಮಚಗೋಣದ 55 ವರ್ಷದ ಪುರುಷ, 48 ವರ್ಷದ ಮಹಿಳೆ, ಹಿರೆಗುತ್ತಿಯ 70 ವರ್ಷದ ವೃದ್ದ, 60 ವರ್ಷದ ವೃದ್ದೆ, ಗುಂದದ 25 ವರ್ಷದ ಪುರುಷ, ಚಿತ್ರಗಿಯ 52 ವರ್ಷದ ಪುರುಷ, ಕೂಜಳ್ಳಿಯ 22 ವರ್ಷದ ಯುವತಿಗೂ ಸೋಂಕು ತಗುಲಿದೆ.

ಹೊನ್ಮಾಂವದ 37 ವರ್ಷದ ಮಹಿಳೆ, ತದಡಿಯ 57 ವರ್ಷದ ಮಹಿಳೆ, ಬಂಗ್ಲೆಗುಡ್ಡದ 7 ವರ್ಷದ ಮಗು, ಮಾದರಿ ರಸ್ತೆಯ 60 ವರ್ಷದ ವೃದ್ದೆ, ಕುಮಟಾದ 23 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು 22 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1606 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 7 ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು 7 ಕರೊನಾ ಕೇಸ್ ದಾಖಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 3, ಗ್ರಾಮೀಣ ಭಾಗದಲ್ಲಿ 4 ಕೇಸ್ ದೃಢಪಟ್ಟಿದೆ. ಪಟ್ಟಣದ ಕೆಳಗಿನಪಾಳ್ಯದಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂಡರೆ, ಗ್ರಾಮೀಣ ಭಾಗವಾದ ಗುಂಡಬಾಳ-ನಗರಬಸ್ತಿಕೇರಿ- ದಿಬ್ಬಣಗಲ್-ಗೇರುಸೋಪ್ಪಾ ಭಾಗದಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯದ 44 ವರ್ಷದ ಮಹಿಳೆ, 55 ವರ್ಷದ ಮಹಿಳೆ, 75 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗವಾದ ಗುಂಡಬಳಾದ 42 ವರ್ಷದ ಪುರುಷ, ನಗರಬಸ್ತಿಯ 75 ವರ್ಷದ ಮಹಿಳೆ, ದಿಬ್ಬಣಗಲ್ ನ 71 ವರ್ಷದ ಪುರುಷ, ಗೆರಸೋಪ್ಪಾದ 59 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ.

ಇಂದು ಐವರು ಬಿಡುಗಡೆಯಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 82 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Back to top button