Important
Trending

Animal Hunting: ಅರಣ್ಯಪ್ರದೇಶದಲ್ಲಿ ಒಂಟಿ ನಳಿಕೆಯ ಬಂದೂಕು ಹಿಡಿದುಕೊಂಡು ಓಡಾಟ: ಇಬ್ಬರ ಬಂಧನ

ಸಿದ್ದಾಪುರ: ಐವರು ಬೇಟೆಗಾರರು ಬೇಟೆಯಾಡುವ (Animal Hunting ) ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆಯ ಬಂದೂಕು ಹಿಡಿದುಕೊಂಡು ಹೋಗುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಕೊಡಗಿಬೈಲ್ ನಲ್ಲಿ ನಡೆದಿದೆ.

ಆರೋಪಿತರಾದ ಅಬ್ದುಲ್ ಹನ್ನಾನ್ ಮಹಮದ್ ಸಾಬ್ ಹೆಗಡೆಕಟ್ಟಾ, ಅತಿಕ್ ಉರ್ ರೆಹಮಾನ್ ಶಿವಮೊಗ್ಗ ಇವರನ್ನ ಬಂಧಿಸಿದ್ದು, ಶಮಿವುಲ್ಲಾ ಅಬ್ದುಲ್ ಅಜೀಮ್, ಅಫ್ಜಲ್ ಅಬ್ದುಲ್ ಅಜೀಮ್ ಹೆಗಡೆಕಟ್ಟಾ, ಇಮ್ರಾನ್ ಅಬ್ದುಲ್ ವಾಹಿಮ್ ಖಾನ್ ಶಿರಸಿ ಪರಾರಿಯಾಗಿದ್ದಾರೆ. ಬಂಧಿತರಿoದ ಜೆನ್ ಕಾರ್ 1, ನಳಿಕೆಯ ಬಂದೂಕು 1, ಕಾಟ್ರೇಜ್ 2, ಟಾರ್ಚ್ 1, ವಶಕ್ಕೆ ಪಡೆಯಲಾಗಿದೆ.

ವಿಸ್ಮಯ ಟಿ.ವಿ WhatsApp ಗ್ರೂಪ್ ಸೇರಲುಇಲ್ಲಿ ಕ್ಲಿಕ್ ಮಾಡಿ

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button