ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಸುವ ನಾಟಕವಾಗಿ ಮದುವೆಯಾಗುವುದಾಗಿ ನಂಬಿಸಿ ಮೋಸ: ಅತ್ಯಾಚಾರ, ಹಲ್ಲೆ, ಗರ್ಭಪಾತ ಮಾಡಿಸಿದ ಕೇಸ್ ದಾಖಲು

ಅಂಕೋಲಾ:ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಪ್ರೀತಿಸುವ ನಾಟಕವಾಡಿ,ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ ಆಕೆ ಗರ್ಭವತಿಯಾಗುತ್ತಿದ್ದಂತೆ,  ಆಕೆಗೆ ಬೆದರಿಕೆ ಹಾಕಿ ಗರ್ಭಪಾತ ಮಾಡಿಸಿದ ಹಾಗೂ ಇತರೆ ಆರೋಪದ ಮೇಲೆ ಯುವಕನೋರ್ವನನ್ನು ವಶಕ್ಕೆ ಪಡೆದಿರುವ ಪೋಲೀಸರು, ಆತನ ಮೇಲೆ  ಪೋಕ್ಸೊ ಕಾಯ್ದೆ, ಅತ್ಯಾಚಾರ, ಹಲ್ಲೆ   ಮತ್ತು ಗರ್ಭಪಾತ  ಮಾಡಿಸಿದಂತ  ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಬೊಬ್ರವಾಡ ಗ್ರಾಮದ ನಿವಾಸಿ  24 ರ ಯುವಕ ಬಂಧಿತ ಆರೋಪಿಯಾಗಿದ್ದಾನೆ. ಅಂಕೋಲಾ ಮತ್ತು ಗೋಕರ್ಣ ಸುತ್ತ ಮುತ್ತ ನಡೆದ ಹತ್ತಾರು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ  ಪೊಲೀಸರಿಂದ ಬಂಧಿಸಲ್ಪಟ್ಟ ಕಳ್ಳರ ಗ್ಯಾಂಗ್ ನಲ್ಲಿ ಈತನೂ ಆರೋಪಿಯಾಗಿದ್ದು, ಕಳೆದ 2-3 ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿದ್ದ.  ಜೈಲಿನಿಂದ ಬಿಡುಗಡೆಗೊಂಡು ಬಂದಿದ್ದರೂ ತನ್ನ ಮನೆಯಲ್ಲಿ ಸರಿಯಾಗಿ ಇರದೇ, ಕುಟುಂಬಸ್ಥರೂ ಪ್ರಶಾಂತ ವಾತಾವರಣದಲ್ಲಿ ನೆಮ್ಮದಿಯಿಂದ ಇರಲು ಬಿಡದೇ, ತನಗಿಷ್ಟ ಬಂದ ಅವರಿವರ ಮನೆಯಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತ ತನ್ನ ಮೋಜು – ಮಸ್ತಿ ಮುಂದುವರೆಸಿದ್ದ ಎನ್ನಲಾಗಿದೆ.

ಈತನ ಪ್ರೇಮ ಪಾಶದಲ್ಲಿ ಬಿದ್ದ ಹುಡುಗಿ, ಆತನ ಕಪಟ ನಾಟಕ ಅರಿಯದೇ ಈಗಲೂ ಅವನು ತನ್ನನ್ನು ಪ್ರೀತಿಸುತ್ತಾನೆಂದು ನಂಬಿ, ತನ್ನನ್ನು ಮದುವೆ ಆಗುವಂತೆ ಅಂಗಲಾಚಿಕೊಂಡಳು ಎನ್ನಲಾಗಿದೆ. ಯುವತಿಯಿಂದ ಮದುವೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಕೆಂಡ ಮಂಡಲವಾದ ಯುವಕ, ಯುವತಿಯ ಹೊಟ್ಟೆಯ ಮೇಲೆ ತುಳಿದು ಹಾಗೂ ಇತರೆ ರೀತಿಯಲ್ಲಿ ದೈಹಿಕ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ನೊಂದ ಯುವತಿ ತನಗಾದ ಅನ್ಯಾಯ ಹಾಗೂ  ನೋವಿನ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ  ಪೊಲೀಸರು , ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ.

ಬಾಲಕಿ 16 ವರ್ಷದವಳಾಗಿರುವಾಗಲೇ, ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದಲ್ಲದೇ ಎರಡು ಬಾರಿ ಗರ್ಭವತಿಯಾಗಲು ಕಾರಣನಾಗಿ ಗರ್ಭಪಾತ ಮಾಡಿಸಲು ಸಹ ಆರೋಪಿತ ಕಾರಣನಾಗಿದ್ದ ಎನ್ನಲಾಗಿದ್ದು ಸೆಕ್ಷನ್ 313 ಅಡಿಯಲ್ಲಿ ಪ್ರಕರಣ , ಮೋಸದಿಂದ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿರುವುದಕ್ಕಾಗಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ,, ಇತ್ತೀಚೆಗೆ ದೈಹಿಕ ಹಲ್ಲೆ ನಡೆಸಿದ ಕಾರಣಕ್ಕೆ ಪ್ರತ್ಯೇಕ ಪ್ರಕರಣ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎನ್ನಲಾಗಿದೆ.

ಆತ  ಈ ಹಿಂದಿನ ಪ್ರಕರಣದಲ್ಲಿ ಜೈಲಿನಿಂದ ಹೊರಬಂದು , 3 – 4 ತಿಂಗಳು ಆಗುವಷ್ಟರಲ್ಲಿಯೇ, ತಾನು ಕಣ್ಣಿಟ್ಟ ಇತರೆ 1-2 ಮನೆಯ ಮಕ್ಕಳು ಮತ್ತು ಹೆಂಗಳೆಯರಿಗೂ  ಮಂಕು ಬೂದಿ ಎರಚಿ ಅವರ ಮನೆಯಲ್ಲಿಯೇ ತುಂಟಾಟ – ಊಟ ಮುಂದುವರೆಸಿ ಕೊಂಡು ಹಾಯಾಗಿ ಇದ್ದ ಎನ್ನಲಾಗಿದ್ದು, ಈತನ ಪ್ರೇಮ ಕಹಾನಿ ಮುಂದೆ ಯಾವೆಲ್ಲಾ ರೀತಿಯ ತಿರುವು ಪಡೆದುಕೊಳ್ಳಬಹುದು ಎಂಬ ಕುರಿತು ಅಲ್ಲಲ್ಲಿ ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version