Trending

ಮೂವರು ಎಲೆ ಮಾನವರು ಅಂದರ್ ? ಇತರೆ ಅಕ್ರಮ ಚಟುವಟಿಕೆಗಳಲ್ಲಿ ಕೆಲವರು ಬಾಹರ್ !! ?.

ಅಂಕೋಲಾ: ತಾಲೂಕಿನಲ್ಲಿ ನಡೆಯುತ್ತಿರುವ ನಾನಾ ರೀತಿಯ ಅಕ್ರಮ ಚಟುವಟಿಕೆಗಳ ಮೇಲೆ, ಹದ್ದಿನ ಕಣ್ಣಿಟ್ಟಿರುವ ಪೊಲೀಸ ಇಲಾಖೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಾಳಿ ಮುಂದುವರಿಸಿದೆ.

ಒಂದು ವಾರದಿಂದೀಚೆಗೆ ಓ.ಸಿ (ಮಟಕಾ ), ಕೋಳಿ ಅಂಕದ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದ ಪೊಲೀಸರು, ಪಟ್ಟಣದ ಕಂತ್ರಿಯಲ್ಲಿ ಅಂದರ್ ಬಾಹರ್ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಮೂವರ ಮೇಲೆ ಪ್ರಕರಣ ದಾಖಲಿಸಿದ ಘಟನೆ ರವಿವಾರ ನಡೆದಿದೆ.

ಅಂಬಾರಕೊಡ್ಲ ನಿವಾಸಿಗಳಾದ ಕಿರಣ ಜಿ ಗೌಡ (26) ಅಶೋಕ ಸುಕ್ರು ಗೌಡ (30) ತೆಂಕಣಕೇರಿ ನಿವಾಸಿ ವಿನಾಯಕ ಎಮ್ ನಾಯ್ಕ (41) ಬಂಧಿತ (ಎಲೆ ಮಾನವರು) ಆರೋಪಿಗಳಾಗಿದ್ದು, ಇವರಿಂದ ಅಂದರ್ ಬಾಹರ್ ಇಸ್ಪೀಟ್ ಆಟಕ್ಕೆ ಬಳಸುವ ಇಸ್ಪೀಟ್ ಎಲೆಗಳು ಮತ್ತು 4920 ನಗದು ಹಣ ವಶ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಆರೋಪಿತರು ಕಂತ್ರಿ ಮಾರುತಿ ದೇವಾಲಯದ ಹಿಂಬದಿಯ ಬಯಲು ಪ್ರದೇಶದಲ್ಲಿ ಅಂದರ್ ಬಾಹರ್ ಆಟದಲ್ಲಿ ತೊಡಗಿಕೊಂಡಿರುವಾಗ ಖಚಿತ ಮಾಹಿತಿ ಮೇರೆಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಇತರೆ ನಾನಾ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿರುವ ಪೋಲೀಸರ ಕಾರ್ಯ ಶ್ಲಾಘನೀಯವೇ ಆಗಿದ್ದರೂ, ಇತರೆ ಕೆಲ ಸಂದರ್ಭಗಳಲ್ಲಿ ಮುಂಚಿತವಾಗಿ ಪೋಲೀಸ್ ದಾಳಿಯ ಸುಳಿವರಿತೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಏನೋ ಕೆಲ ಅಡ್ನಾಡಿ ದಂಧೆಕೋರರು ಅಥವಾ ಅದಕ್ಕೆ ಸಹಕರಿಸುವವರು ಮಾತ್ರ ಪ್ರಕರಣಗಳಲ್ಲಿ ಸಿಲುಕಿಕೊಳ್ಳದೇ ತಮ್ಮ ಚಾಣಾಕ್ಷತನ ಇಲ್ಲವೇ ಕೆಲ ಪ್ರಭಾವದಿಂದ ಹೊರಗುಳಿಯುತ್ತಾರೆ ಎನ್ನಲಾಗಿದೆ.

ಈ ಬಗ್ಗೆ ಪೋಲೀಸ್ ಇಲಾಖೆ ಮತ್ತಷ್ಟು ಚುರುಕುಗೊಂಡು ಕಾರ್ಯಾಚರಿಸಿ ತನ್ನ ಕಾರ್ಯಕ್ಷಮತೆ ಮೂಲಕ ಇಲಾಖೆ ಬಗ್ಗೆ ಜನರಲ್ಲಿ ಮತ್ತಷ್ಟು ವಿಶ್ವಾಸ ಹೆಚ್ಚಿಸಬೇಕಿದೆ ಎಂಬ ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button