Follow Us On

WhatsApp Group
Focus NewsImportant
Trending

ಸ್ನಾನಕ್ಕಾಗಿ ನದಿಗೆ ಇಳಿದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ: ಮೊಸಳೆ ಕಾಟದಿಂದ ಕಂಗಾಲಾದ ಸಾರ್ವಜನಿಕರು

ದಾಂಡೇಲಿ: ಈಜಲು ನದಿಗೆ ಇಳಿದ ವ್ಯಕ್ತಿಯನ್ನು ಎರಡು ಮೊಸಳೆಗಳು ದಾಳಿ ನಡೆಸಿ ಎಳೆದೊಯ್ದ ಘಟನೆ ತಾಲೂಕಿನ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ. ನದಿ ದಂಡೆಯ ಮೇಲೆ ಬಟ್ಟೆ ಹಾಗೂ ಚಪ್ಪಲಿ ತೆಗೆದಿಟ್ಟು ಸ್ನಾನಕ್ಕಾಗಿ ವ್ಯಕ್ತಿ ಇಳಿದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಮೇಲೆ ಬರುವಂತೆ ಕೂಗಿ ಹೇಳಿದ್ದಾರೆ. ಆದರೆ ಇಳಿದ ಕೆಲವೇ ಹೊತ್ತಿನಲ್ಲಿ ಎರಡು ಮೊಸಳೆಗಳು ಆತನ ಮೇಲೆ ದಾಳಿ ನಡೆಸಿವೆ, ಈಜಲು ನೀರಿಗಿಳಿದ ವ್ಯಕ್ತಿಯನ್ನು ಎಳೆದೊಯ್ದಿದೆ.

India Post Recruitment 2022: 18 ರಿಂದ 81 ಸಾವಿರ ಆರಂಭಿಕ ವೇತನ: SSLC & PUC ಆದವರು ಅರ್ಜಿ ಸಲ್ಲಿಸಬಹುದು

ಮೊಸಳೆ ಎಳೆದೊಯ್ಯುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಪತ್ತೆಯಾದ ವ್ಯಕ್ತಿಗಾಗಿ ಕಾಳಿ ನದಿಯಲ್ಲಿ ಹುಡುಕಾಟ ನಡೆದಿದೆ. ಕಾಳಿ ನದಿಯಲ್ಲಿ ಮೊಸಳೆಗಳ ಸಂತತಿ ಗಣನೀಯವಾಗಿ ಹೆಚ್ಚಳ ಕಂಡಿವೆ. ನದಿಯಲ್ಲಿ ಮಾತ್ರವಲ್ಲದೆ, ನದಿ ದಂಡೆ ಸಾರ್ವಜನಿಕ ಪ್ರದೇಶಗಳಿಗೂ ಆಗಾಗ ಮೊಸಳೆಗಳು ನುಗ್ಗಿತ್ತಿರುವ ಪ್ರಕರಣ ವರದಿಯಾಗುತ್ತಲೇ ಇದೆ.

ಅಲ್ಲದೆ, ಕಳೆದೊಂದು ವರ್ಷದಲ್ಲಿ ನೀರಿಗಳಿದ ನಾಲ್ಕೈದು ಜನರನ್ನು ಮೊಸಳೆ ಹೊತ್ತೊಯ್ದ ಘಟನೆ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೂತಾಂಬರಿ ದಾಸ್ ಎನ್ನಲಾಗಿದೆ. ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button