Focus NewsImportant
Trending

ಖಚಿತ ಮಾಹಿತಿ ಮೇರೆಗೆ ಅಕ್ರಮ ಗೋವಾ ಸರಾಯಿ ವಶಕ್ಕೆ: ಓರ್ವನ ಬಂಧನ

ಜೊಯಿಡಾ: ಖಚಿತ ಮಾಹಿತಿ ಮೇರೆಗೆ ಜಾವಾನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ಅಕ್ರಮ ಗೋವಾ ಸರಾಯಿಯನ್ನು ವಾಹನ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಸಯ್ಯದ ಜುನೇದ್ ಎಂಬುವನನ್ನು ದಸ್ತಗಿರಿ ಮಾಡಲಾಗಿದ್ದು ,ವಾಹನ ಮಾಲೀಕನನ್ನುಪತ್ತೆ ಹಚ್ಚಬೇಕಾಗಿದೆ. ಒಟ್ಟೂ 207 ಲೀಟರ್ ಗೊವಾ ಸರಾಯಿ ವಶಕ್ಕೆ ಪಡೆದಿದ್ದು,ವಾಹನ ಮತ್ತು ಸರಾಯಿ ಅಂದಾಜು ಮೌಲ್ಯ ಸೇರಿ 7,27,760 ರೂಪಾಯಿ ಆಗಿದೆ.

ವನಜಾಕ್ಷಿ ಎಂ ಅಬಕಾರಿ ಉಪ ಆಯುಕ್ತರು ಕಾರವಾರ ಮತ್ತು ಶಂಕರಗೌಡ ಪಾಟೀಲ ಅಬಕಾರಿ ಉಪ ಅಧಿಕ್ಷಕರು ಯಲ್ಲಾಪುರ ಇವರ ಮಾರ್ಗದರ್ಶನದಲ್ಲಿ ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ ಶ್ರೀಕಾಂತ ಬಿ ಅಸೂದೆ ಅಬಕಾರಿ ಪೇದೆಗಳಾದ ರಾಜು ಭಟ್ಕಳ ,ನಾಗೇಂದ್ರ ಬಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button