Important
Trending

ಕಾಡಿಗೆ ಹೋದ ವೇಳೆ ಏಕಾಏಕಿ ಎರಗಿದ ಕರಡಿ: ರೈತ ಸಾವು

ಶಿರಸಿ: ಕರಡಿ ದಾಳಿಗೆ ವ್ಯಕ್ತಿ ಯೋರ್ವ ಬಲಿಯಾದ ಘಟನೆ ತಾಲೂಕಿನ ದೇವನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಓಂಕಾರ ಜೈನ ( 50) ಮೃತ ಪಟ್ಟ ದುರ್ದೈವಿ ಯಾಗಿದ್ದಾನೆ. ಇತನು ಬುಧವಾರ ಉಪ್ಪಗೆ ಸಿಪ್ಪೆಗಾಗಿ ಕಾಡಿಗೆ ಹೋದ ಸಮಯದಲ್ಲಿ ಏಕಾಏಕಿ ಕರಡಿಧಾಳಿ ನಡೆಸಿದೆ.ಕರಡಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗದೆ ಅಲ್ಲೇ ಮೃತ ಪಟ್ಟಿದ್ದಾನೆ.

ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು

ಕಾಡಿಗೆ ಹೋದವನು ಬಾರದೆ ಇರುವುದರಿಂದ ಮನೆಯವರು ಹುಡುಕಾಟ ನಡೆಸಲು ಪ್ರಾರಂಭಿಸಿದಾಗ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button