ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು

ಪ್ರಯಾಣಿಸುತ್ತಿದ್ದಾಗ ಸುಂಟರಗಾಳಿಗೆ ಕಾರು ಸಿಲುಕಿ ಈ ದುರಂತ

ಕಾರವಾರ: ಮಸ್ಕತ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಕಾರವಾರ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಯಲ್ಲಾಪುರ ಮೂಲದ ಯುವತಿಯ ಜೊತೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಮೃತವ್ಯಕ್ತಿಯನ್ನು ತೆಲಂಗ ರಸ್ತೆಯ ನರ್ತಾಭಾಗ್ ನಿವಾಸಿ ಎಂದು ಗುರುತಿಸಲಾಗಿದೆ.

ಹೆಂಡತಿ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾಳೆ ಎಂದು ಮನನೊಂದು ಗಂಡ ಸಾವಿಗೆ ಶರಣು

ಈತ ಕಳೆದ ಕೆಲ ವರ್ಷಗಳಿಂದ ಮಸ್ಕತ್‌ನಲ್ಲಿ ಕೆಲಸ ಮಾಡುತ್ತಿದ್ದು , ತನ್ನ ನೌಕರರನ್ನ ಕಾರಿನಲ್ಲಿ ಬಿಟ್ಟು ಬರುವಾಗ ಅಪಘಾತ ಆಗಿದ್ದು, ಈ ವೇಳೆ ಮೃತಪಟ್ಟಿದ್ದಾನೆ. ಬೆಂಜಿಮ್ ಸಹೋದರ ಸಹ ಕುವೈತ್‌ನಲ್ಲಿದ್ದಾನೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸುಂಟರಗಾಳಿಗೆ ಕಾರು ಸಿಲುಕಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version