Follow Us On

WhatsApp Group
Important
Trending

ಅಲ್ಲಿ ಮದುವೆ ತಯಾರಿ ಇಲ್ಲಿ ಮನೆಗೆ ಬೆಂಕಿ : ಉಳಿಯಲು ಮನೆಯೇ ಇಲ್ಲ

ಬಡ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಸುಟ್ಟು ಭಸ್ಮವಾದ ಮನೆ

ಹೊನ್ನಾವರ: ಬಡ ಮಹಿಳೆಯೋರ್ವಳ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಸಂಶಿಯಲ್ಲಿ ನಡೆದಿದೆ. ಜಮೀನಿನ ಕುರುಹುಗಳನ್ನು ನಾಪತ್ತೆ ಮಾಡುವ ಕಾರಣಕ್ಕಾಗಿ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ದೂರಿನಿಂದ ತಿಳಿದು ಬಂದಿದೆ.

ನಾರಾಯಣ ನಾಗಪ್ಪ ಗೌಡ ಸಂಶಿ ಇವರು ಆರೋಪಿತರು ಎನ್ನಲಾದ ಸಂಶಿಯ ಶಿವರಾಮ ಸುಬ್ಬಯ್ಯ ಗೌಡ, ದೇವ ಹೊನ್ನಾ ಗೌಡ, ಗೇರುಸೊಪ್ಪ ಶಶಿಗೋಳಿಯ ವಿಶ್ವನಾಥ ಅಣ್ಣಪ್ಪ ಗೌಡ, ಗೋಪಾಲ ಅಣ್ಣಪ್ಪ ಗೌಡ ವಿರುದ್ದ ದೂರು ದಾಖಲಿಸಿದ್ದಾರೆ.  ಇವರು ಅಕ್ಕ ಪಕ್ಕದ ಮನೆಯವರಾಗಿದ್ದು, ಈ ಹಿಂದಿನಿಂದಲೂ ಜಮೀನಿನ ವಿಷಯಕ್ಕೆ ದ್ವೇಷ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ತಂಗಿ ವಾಸ್ತವ್ಯ ಮಾಡಿಕೊಂಡಿರುವ ಬಂದಿರುವ ಜಮೀನಿನಿಂದ ಒಕ್ಕಲೆಬ್ಬಿಸಲು ಉದ್ದೇಶದಿಂದ ಇವರೆಲ್ಲರೂ ಸೇರಿ ನಾನು ಅವರ ಮನೆಯಲ್ಲಿ ಇರುವುದನ್ನು ನೋಡಿ ಮನೆಯ ಒಳಗೆ ಪ್ರವೇಶಮಾಡಿ ನನಗೆ ಹಲ್ಲೆ ಮಾಡಿ ಮನೆಗೆ ಬೆಂಕಿ ಇಟ್ಟಿದ್ದಾರೆ ಎಂದು ದೂರು ನೀಡಿದ್ದಾರೆ.

ಘಟನೆಯ ಸಾರಾಂಶವೇನು….? ದೂರುದಾರ ನಾರಾಯಣ ನಾಗಪ್ಪ ಗೌಡ ಸಂಶಿ ಇವರ ಸಹೋದರಿ ಲಕ್ಷ್ಮೀ ಗೌಡ ತನ್ನ ತವರು ಮನೆಯ ಜಾಗದಲ್ಲಿ ಮನೆ ಕಟ್ಟಿಕೊಂಡು ಮಗಳೊಂದಿಗೆ ವಾಸ್ತಸ್ಯ ಮಾಡಿಕೊಂಡಿದ್ದಾಳೆ. ತವರು ಮನೆಯ ಜಮೀನಿಗೆ ಸಂಬಂಧ ಪಟ್ಟಂತೆ ದಾಯಾದಿಗಳ ನಡುವೆ ದ್ವೇಷವಿತ್ತು ಎನ್ನಲಾಗುತ್ತಿದೆ. ಇವರ ಜಾಗದ ಮೇಲೆ ಕಣ್ಣಿಟ್ಟವರಿಗೆ ಲಕ್ಷ್ಮೀ ಇಲ್ಲೇ ಬಂದು ವಾಸ್ತವ್ಯ ಮಾಡಿದ್ದು ತೋಡಕಾಗಿತ್ತು. ದೂರುದಾರನಿಗೆ ಮದುವೆಯಾಗಿರಲಿಲ್ಲ, ಅವನು ಉಳಿದುಕೊಂಡಿರುವ ಮನೆಯು ಮುರಿದು ಬಿದ್ದಿದೆ. ರವಿವಾರ ತನ್ನ ಕಿರಿಯ ತಂಗಿಯ ಮದುವೆ ಇರುವುದರಿಂದ ಲಕ್ಷ್ಮೀ ಮತ್ತು ಆಕೆಯ ಮಗಳು ಮನೆಯಲ್ಲಿ ಇರದ ಕಾರಣ ಆದಿನ ಮನೆಯಲ್ಲಿ ದೂರುದಾರ ಒಬ್ಬನೇ ಮಲಗಿಕೊಂಡಿದ್ದ. ಲಕ್ಷ್ಮೀ ತವರು ಮನೆಯ ಜಾಗದಲ್ಲೇ ಉಳಿದು ಉಳಿದುಕೊಂಡಿದ್ದು, ಹೇಗಾದರೂ ಮಾಡಿ ಅವಳ ಮನೆ ಖಾಲಿ ಮಾಡಿಸಿ ಜಮೀನು ಹೊಡೆಯುವ ಪ್ರಯತ್ನ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲಿ ಮದುವೆ ತಯಾರಿ ಇಲ್ಲಿ ಮನೆಗೆ ಬೆಂಕಿ : ದೂರುದಾರ ನಾರಾಯಣ ನಾಗಪ್ಪ ಗೌಡ ಇವರ ಕಿರಿಯ ಸಹೋದರಿಯ ಮದುವೆ ರವಿವಾರ ನಡೆದಿತ್ತು. ತನ್ನ ಕಿರಿಯ ಸಹೋದರಿಯ ಮದುವೆ ಮತ್ತೊಂದು ಸಹೋದರಿಯ ಮನೆಯಲ್ಲಿಯೇ ತಯಾರಿ ಮಾಡಿಕೊಳ್ಳಲಾಗಿತ್ತು. ಹಾಗಾಗಿ ಎಲ್ಲರು ಅಲ್ಲಿ ಮದುವೆ ಸಂಭ್ರಮದಲ್ಲಿದಲ್ಲಿದ್ದರೆ, ಇಲ್ಲಿ ಅದೇ ಸಮಯ ನೋಡಿ ಶನಿವಾರ ರಾತ್ರಿ ಮನೆಯಲ್ಲಿ ಇದ್ದ ವ್ಯಕ್ತಿಗೆ ಹಲ್ಲೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿದ್ದಾರೆ.

ಉಳಿಯಲು ಮನೆಯೇ ಇಲ್ಲ :ತಂಗಿ ಮದುವೆಗೆ ಹೋಗಿದ್ದ ಇವರಿಗೆ ಈಗ ಉಳಿಯಲು ಮನೆಯೇ ಇಲ್ಲದಂತಾಗಿದೆ. ಉಟ್ಟ ಬಟ್ಟೆ, ಹೋಗುವಾಗ ತೆಗೆದುಕೊಂಡು ಹೋಗಿದ್ದ ವಸ್ತುಗಳು ಬಿಟ್ಟರೆ ಬಾಕಿ ಎಲ್ಲವು ಬೆಂಕಿಗೆ ಆಹುತಿಯಾಗಿದೆ. ತಾಯಿ ಮಗಳಿಗೆ ಉಳಿಯಲು ಮನೆಯು ಇಲ್ಲ, ತೊಡಲು ಬಟ್ಟೆಯಿಲ್ಲ, ಉಟೋಪಚಾರವು ಕಷ್ಟವೇ ಆಗಿದೆ. ಎಲ್ಲಾ ಇದ್ದು ನಿರ್ಗತಿಕಲಂತಾಗಿದೆ ಇವರ ಬದುಕು. 

ಮನೆಗೆ ಬೆಂಕಿ ತಗುಲಿದ್ದರಿಂದ ಮನೆಯಲ್ಲಿದ್ದಂತಹ ಬಟ್ಟೆಗಳು, ಮನೆ ಬಳಕೆಯ ಸಾಮಗ್ರಿಗಳು ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿದೆ. ಮಗಳ ವಿದ್ಯಾಭ್ಯಾಸದ ಎಲ್ಲಾ ಪೀಠೋಪಕರಣಗಳು, ರೇಷನ್ ಸಾಮಗ್ರಿಗಳು, ಎಲ್ಲರ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಪಾಸ್‌ಬುಕ್‌ಗಳು ಕೂಡಾ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿ ಮದುವೆಗೆ ಸಂಗ್ರಹಿಸಿಟ್ಟ 45,000 ರೂ. ಹಣ ಸುಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಧರ್ ನಾಯ್ಕ, ವಿಸ್ಮಯ ನ್ಯೂಸ್, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button