Important
Trending

ಕಿರುಕುಳದಿಂದ ವೈದ್ಯೆ ಆತ್ಮಹತ್ಯೆ ಆರೋಪ; ಕಪ್ಪುಪಟ್ಟಿ ಧರಿಸಿ ಕಾರವಾರದಲ್ಲಿ ಪ್ರತಿಭಟನೆ

ಕಾರವಾರ: ರಾಜಸ್ಥಾನದಲ್ಲಿ ಪೊಲೀಸರ ಕಿರುಕುಳಕ್ಕೆ ಮನನೊಂದು ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಖಂಡಿಸಿ ಜನಶಕ್ತಿ ವೇದಿಕೆ ಸದಸ್ಯರು ನಗರದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ಜೊತೆಗೂಡಿ ಕೈಗೆ ಪಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನದ ದೌಸಾದಲ್ಲಿ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮೃತಳ ಕುಟುಂಬ ಮೃತದೇಹವನ್ನು ಕೊಂಡೊಯ್ದಿದ್ದರೂ, ಸ್ಥಳೀಯ ಕೆಲ ಮುಖಂಡರುಗಳು ಮೃತದೇಹದೊಂದಿಗೆ ಡಾ.ಅರ್ಚನಾ ಅವರ ಆಸ್ಪತ್ರೆಯ ಎದುರು ಪ್ರತಿಭಟಿಸಿ, ಪೊಲೀಸರನ್ನು ಕರೆಯಿಸಿದ್ದಾರೆ.

ಪೊಲೀಸರು ಪ್ರಕರಣದ ಹಿನ್ನೆಲೆ ತಿಳಿಯದೇ ವೈದ್ಯೆಯ ವಿರುದ್ಧ ಐ ಪಿ ಸಿ ಕಲಂ 302 ಕೊಲೆ ಆರೋಪದ ಪ್ರಕರಣ ದಾಖಲಿಸಿ, ಆಕೆಗೆ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಮನನೊಂದ ಡಾ.ಅರ್ಚನಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದು ಇಡೀ ದೇಶವೇ ತಲೆತಗ್ಗಿಸುವಂಥ ಘಟನೆಯಾಗಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಒಬ್ಬ ಅಪರಿಚಿತ ರೋಗಿಯ ಪ್ರಾಣ ಉಳಿಸಲು ಹೋರಾಡುತ್ತಾರೆ. ಆದರೆ ಯಾವುದೋ ಸಂದರ್ಭದಲ್ಲಿ ಏನೋ ಘಟನೆ ನಡೆಯಿತೆಂದು ವೈದ್ಯರನ್ನೇ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿ ಮಾಡುವುದು ಸರಿಯಾದುದಲ್ಲ.

ಇದು ಉಳಿದ ವೈದ್ಯರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯುಗಾದಿ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರಿಗೆ ಕಪ್ಪು ಪಟ್ಟಿ ಕಟ್ಟಿ ಜನಶಕ್ತಿ ವೇದಿಕೆ ಸದಸ್ಯರು ಪ್ರತಿಭಟಿಸುವ ಮೂಲಕ ಘಟನೆಗಳನ್ನು ಖಂಡಿಸಿ, ಮೃತ ವೈದ್ಯರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ ಎಂದರು.

ಈ ವೇಳೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ, ಸರ್ಜನ್ ಶಿವಾನಂದ ಕುಡ್ತಲ್ಕರ್, ಕಸಾಪ ತಾಲ್ಲೂಕಾ ಅಧ್ಯಕ್ಷ ರಾಮಾ ನಾಯ್ಕ, ಖೈರೋನ್ನಿಸಾ ಶೆಖ್ ಇನ್ನಿತರರು ಇದ್ದರು.

ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ)ದ ಜಿಲ್ಲಾ ಶಾಖೆ ಕೂಡ ಬೆಂಬಲ ಸೂಚಿಸಿತ್ತು. ಅಲ್ಲದೆ ಜಿಲ್ಲೆಯ ಕೆಲ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೂಡ ಪ್ರತಿಭಟನೆಗೆ ಕೈಜೋಡಿಸಿವೆ.

ವಿಸ್ಮಯ ನ್ಯೂಸ್ ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button