Focus News
Trending

ಅಂಕೋಲಾ ತಾಲೂಕಿನ ಜನತೆಗೆ ಕರೊನಾ ಶಾಕ್: ಇಂದು 32 ಕೇಸ್?

ಅಂಕೋಲಾದಲ್ಲಿoದು 32 ಕೇಸ್?
ದಿನವೊಂದರಲ್ಲಿಯೇ ಗರಿಷ್ಠ ಪ್ರಕರಣ
ದ್ವಿಶತಕ ದಾಟಿದ ಕರೊನಾ ಪಾಸಿಟಿವ್ ಪ್ರಕರಣ
ಶಿರಸಿಯಲ್ಲಿ 10 ಕೇಸ್ ದಾಖಲು

ಅಂಕೋಲಾ : ಪಟ್ಟಣ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಮಂಗಳವಾರ ಕರೊನಾ ಮಾರಿಯ ಅಟ್ಟಹಾಸ ಒಮ್ಮೆಲೆಯೇ ಹೆಚ್ಚಾಗಿ 32ಕ್ಕೂ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಈವರೆಗೆ ದಿನವೊಂದರಲ್ಲಿಯೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಇಂದು ಕಾಣಿಸಿಕೊಂಡಿದ್ದು ಈ ಮೂಲಕ ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ 200 ದಾಟಲಿದೆ ಎಂಬ ಮಾಹಿತಿ ಬಂದಿದೆ. ಸೋಮವಾರದವರೆಗೆ ಸಕ್ರೀಯವಾಗಿದ್ದ 29 ಸೋಂಕಿನ ಪ್ರಕರಣಗಳಿಗೆ ಇಂದಿನ ಹೊಸ ಪ್ರಕರಣಗಳು ಸೇರ್ಪಡೆಗೊಳ್ಳುವುದರೊಂದಿಗೆ ಒಟ್ಟೂ ಸಕ್ರೀಯ ಸೋಂಕಿನ ಪ್ರಕರಣಗಳು 61 ಕ್ಕೆ ಏರಿಕೆಯಾಗಲಿದೆ.


ಕರೊನಾ ವಾರಿಯರ್ಸಗಳು ನೀಡಿದ ನಿರಂತರ ಸೇವೆ ಹಾಗೂ ಪರಿಶ್ರಮದ ಫಲವಾಗಿ ತಾಲೂಕಿನಲ್ಲಿ ಸೋಂಕಿನ ಪ್ರಸರಣಗಳು ನಿಯಂತ್ರಣದಲ್ಲಿದ್ದವು. ನಾನಾ ಕಾರಣಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ಸಹಿತ ಎಲ್ಲಾ ಕರೊನಾ ವಾರಿಯರ್ಸಗಳಿಗೆ ಸವಾಲಿನ ಜವಾಬ್ದಾರಿಯಾಗಿದೆ. ಈ ಹಿಂದೆ ಉತ್ತಮ ಸಹಕಾರ ನೀಡಿದ್ದ ಜನತೆ ಮುಂದೆಯೂ ಹಲವು ಕಟ್ಟೆಚ್ಚರ ವಹಿಸಿ ಸೋಂಕು ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳೊಂದಿಗೆ ಕೈಜೋಡಿಸಿ ಸಹಕರಿಸಬೇಕಿದೆ.

ಶಿರಸಿಯಲ್ಲಿ ಮಂಗಳವಾರ 10 ಕೇಸ್ ದಾಖಲು

ಶಿರಸಿ: ಶಿರಸಿ ತಾಲೂಕಿನಲ್ಲಿ ಮಂಗಳವಾರ 10 ಕರೊನಾ ಕೇಸ್ ದೃಢಪಟ್ಟಿದೆ ಎನ್ನಲಾಗಿದೆ. ಶ್ರೀನಗರ, ಟಿಪ್ಪುನಗರ, ಸೋಂದಾ ( ತೆಂಕಿನಬೈಲ್ ), ಚೌಕಿಮಠ ಸೇರಿ ಇಂದು ಒಟ್ಟು 10 ಕರೊನಾ ಪ್ರಕರಣ ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಇದುವರೆಗೆ ಕರೊನಾದಿಂದಾಗಿ ಒಂಬತ್ತು ಜನರು ಮೃತಪಟ್ಟಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ

ದಿ ಭದ್ರಾ ಸೋಲಾರ್ ವಾಟರ್ ಹೀಟರ್
ವೆಂಕಿನ್ ಸೋಲಾರ್
7 ರಿಂದ 10 ವರ್ಷದ ಗ್ಯಾರಂಟಿ
ಕೈಗೆಟಕುವ ಬೆಲೆಯಲ್ಲಿ ಲಭ್ಯ
ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಾಡೆಕ್ಟ್
ಪರಿಸರ ಸ್ನೇಹಿಯಾಗಿದೆ
ಹಣ ಮತ್ತು ವಿದ್ಯುತ್ ಉಳಿಸಲು ಸಹಕಾರಿ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button