Follow Us On

Google News
Important
Trending

ಬನವಾಸಿ ರಥೋತ್ಸವ: ಹಿಂದೂಯೇತರರಿಗೆ ಅಂಗಡಿ ನೀಡದಿರಲು ಸಮಿತಿ ನಿರ್ಣಯ: ದೇವಸ್ಥಾನದ ಆವರಣದಲ್ಲಿ ಬ್ಯಾನರ್ ಅಳವಡಿಕೆ

ಬನವಾಸಿ: ಜಾತ್ರೆಯಲ್ಲಿ ದೇವಸ್ಥಾನದ ಸಮೀಪದ ಕಟ್ಟಡ ಅಥವಾ ನಿವೇಶದಲ್ಲಿ ಹಿಂದೂಯೇತರರಿಗೆ ಅಂಗಡಿ ನೀಡದಿರುವ ವಿವಾದ ಇದೀಗ ಉತ್ತರಕನ್ನಡಕ್ಕೂ ವ್ಯಾಪಿಸಿದೆ. ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವ ಇದೇ ಏಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು, ದೇವಸ್ಥಾನದ ಸಮೀಪದ ಕಟ್ಟಡ ಅಥವಾ ನಿವೇಶನಗಳಲ್ಲಿ ಹಿಂದೂಯೇತರರಿಗೆ ಮಳಿಗೆ ಗುತ್ತಿಗೆ ಅಥವಾ ಬಾಡಿಗೆ ನೀಡದಿರಲು ದೇವಸ್ಥಾನದ ಸಮಿತಿ ನಿರ್ಧರಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ನಿಯಮದ ಅನ್ವಯ ಹಿಂದೂಯೇತರರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಹಿಂದೂಗಳಲ್ಲದವರಿಗೆ ರಥೋತ್ಸವದ ವೇಳೆ ಮಳಿಗೆ ತೆರೆಯಲು ಅವಕಾಶ ನೀಡದಿರಲು ದೇವಾಲಯ ಸಮಿತಿ ನಿರ್ಧರಿಸಿದೆ. ದೇವಸ್ಥಾನದ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳು ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ ಎಂಬ ಬ್ಯಾನರ್ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button