Follow Us On

WhatsApp Group
Important
Trending

ಕಂಡಕಂಡಲ್ಲಿ ಡ್ರೋನ್ ಚಿತ್ರೀಕರಣ: ಸ್ಥಳೀಯರಿಗೆ ಕಿರಿಕಿರಿ: ಚಿತ್ರೀಕರಣ ನಡೆಸುತ್ತಿದ್ದವರನ್ನು ಠಾಣೆಗೆ ಕರೆತಂದ ಪೊಲೀಸರು

ಮಹಿಳೆಯರಿಗೆ ಕಾಡುತ್ತಿದೆ ಸುರಕ್ಷತೆ ಭಯ

ಹೊನ್ನಾವರ: ತಾಲೂಕಿನ ಕಾಸರಕೋಡ ಕಡಲತೀರ ಪ್ರದೇಶದಲ್ಲಿರುವ ಇಕೋ ಬೀಚ್ ಹಾಗೂ ಅಪ್ಪರಕೊಂಡ ಕಡಲತೀರಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ನಿಯಮ ಪಾಲನೆ ಸರಿಯಾಗಿ ಮಾಡುತ್ತಿಲ್ಲ. ಸ್ವಚ್ಚತೆ ಹಾಗೂ ಸಮುದ್ರಕ್ಕೆ ಇಳಿಯುವಾಗ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ ಎನ್ನುವ ಆರೋಪಗಳು ಈ ಹಿಂದಿನಿದಲೂ ಕೇಳಿಬರುತ್ತಿದ್ದವು.

ಈ ಎಲ್ಲದರ ಮಧ್ಯೆ ಇತ್ತೀಚಿಗೆ ಹಲವು ರೀತಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿಯೂ ಡ್ರೋನ್ ಚಿತ್ರೀಕರಣ ಸ್ಥಳಿಯರಿಗೆ ಕಿರಿಕಿರಿ ಜೊತೆ ಮಹಿಳೆಯರಿಗೆ ಹಾಗೂ ಮಕ್ಕಳ ಸುರಕ್ಷತೆಯ ಚಿಂತೆ ಕಾಡುತ್ತಿತ್ತು. ಡೋಣ್ ಚಿತ್ರೀಕರಣ ಮಾಡುವಾಗ ಯಾವುದೇ ನಿಯಮ ಪಾಲಿಸದೇ ರಾತ್ರಿ- ಹಗಲು ಎನ್ನದೇ ಈ ಭಾಗದಲ್ಲಿ ಚಿತ್ರೀಕರಣ ನಡೆಯುತ್ತದೆ ಎಂದು ಸ್ಥಳೀಯರು ಮತ್ತೆ ಪೊಲೀಸ್ ಇಲಾಖೆಗೆ ಮನವಿ ನೀಡಿದ್ದರು.

ಈ ಹಿನ್ನಲೆಯಲ್ಲಿ ಮಂಕಿ ಪೊಲೀಸರು ನಿಯಮ ಪಾಲನೆ ಮಾಡದೇ ಇದ್ದವರಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಆದರೂ ರಾತ್ರಿ 7ಗಂಟೆ ಸಮಯದಲ್ಲಿ ಸಮುದ್ರ ತೀರದಲ್ಲಿ ಡ್ರೋನ್ ಹಾರಾಟ ಹಿನ್ನಲೆ ಸ್ಥಳಕ್ಕಾಗಮಿಸಿದ ಮಂಕಿ ಪಿಎಸೈ ಅಶೋಕ ಮಾಳಬಗಿ, ಕ್ಯಾಮೆರಾ ಸಮೇತ ಚಿತ್ರೀಕರಣ ನಡೆಸುತ್ತಿದ್ದವರನ್ನು ಠಾಣೆಗೆ ಕರೆತಂದು ಎಚ್ಚರಿಕೆ ನೀಡಿ, ನಿಯಮ ಪಾಲನೆ ಮಾಡದೇ ಹೋದಲ್ಲಿ ಮುಂದಿನ ದಿನದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button