Follow Us On

WhatsApp Group
Important
Trending

ತವರಿಗೆ ಮರಳಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು

ಸಿದ್ದಾಪುರ: ದಶಕಗಳಿಗೂ ಹೆಚ್ಚು ಕಾಲ ಹಗಲು-ರಾತ್ರಿ ಎನ್ನದೆ ದೇಶಸೇವೆ ಮಾಡಿ ಸೇನಾ ನಿವೃತ್ತಿ ಬಳಿಕ ಸ್ವ ಗ್ರಾಮಕ್ಕೆ ಮರಳಿದ ಸೈನಿಕನಿಗೆ ಸಿದ್ದಾಪುರದಲ್ಲಿ ಸ್ಥಳೀಯರು ಸೇರಿದಂತೆ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ತಾಲ್ಲೂಕಿನ ಕಲಕೈನ ಯೋಧ ಷಣ್ಮುಖ ಗೌಡ 17 ವರ್ಷದ ದೇಶ ಸೇವೆ ಬಳಿಕ ಇತ್ತೀಚೆಗೆ ನಿವೃತ್ತರಾಗಿ ಮಂಗಳವಾರ ಸ್ವ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಸ್ಥಳೀಯರು ಷಣ್ಮುಖ ಗೌಡ ಅವರಿಗೆ ಹೂ ಹಾರ ಹಾಕಿ ಪುಷ್ಪವೃಷ್ಠಿ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು.

ಇದೇ ವೇಳೆ ಸೈನಿಕನ ಮಡದಿ ಹಾಗೂ ಮಗಳು ಕೂಡ ಉಡುಗೋರೆ ನೀಡಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘಟನೆ ಕಾರ್ಯಕರ್ತರು ಸ್ಥಳೀಯರು ಕೂಡ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಿವೃತ್ತ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಷಣ್ಮುಖ ಗೌಡ ಮಾರ್ಚ್ 2005 ರಂದು ಸೈನ್ಯಕ್ಕೆ ಸೇರಿ ಉತ್ತರಪ್ರದೇಶದ ಲಕ್ನೊದಲ್ಲಿ ಕರ್ತವ್ಯ ಪ್ರಾರಂಭಿಸಿ ಬಳಿಕ ರಾಜಸ್ಥಾನದ ಬರ್ಮರ್, ಜಲಂಧರ್, ಜಮ್ಮು ಮತ್ತು ಕಾಶ್ಮೀರ್, ಅಹಮದಾಬಾದ್, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿ ಎಪ್ರಿಲ್ ೧ ರಂದು ನಿವೃತ್ತಿಯಾಗಿದ್ದರು.

ಈ ಬಗ್ಗೆ ಮಾತನಾಡಿದ ಷಣ್ಮುಖ ಗೌಡ, ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಆಗಮಿಸಿದಾಗ ಊರಿನ ಜನರು ಸ್ವಾಗತ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ನಮ್ಮದು ಚಿಕ್ಕ ಊರು, ಆದರೂ ಎಲ್ಲರೂ ಸೇರಿ ಇಷ್ಟೊಂದು ಅದ್ದೂರಿಯಾಗಿ ಸ್ವಾಗತಿಸಿ ಪ್ರೀತಿ‌ ತೋರಿಸಿರುವುದು ತುಂಬಾ ಖುಷಿ ತಂದಿದೆ. ದೇಶದ ಹಲವು ಕಡೆ ಕರ್ತವ್ಯ ನಿಭಾಯಿಸಿದ್ದೇನೆ.

ಅದರಲ್ಲಿಯೂ ಕಾಶ್ಮಿರದಲ್ಲಿ‌ 2014 ರಲ್ಲಿ ಜಲಪ್ರವಾಹದ ವೇಳೆ ಎಲ್ಲಿಯೂ ಸಂಪರ್ಕ ಸಾಧಿಸಲು ಸಾಧ್ಯವಾಗದ ಸ್ಥಿತಿಯಲ್ಲಿ 45 ದಿನಗಳ ಕಾಲ ಕಳೆದ ಸ್ಥಿತಿ ಭಯಾನಕ. ಆದರೇ 17 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಮಾಡಿದ ಸಂತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button