Follow Us On

WhatsApp Group
Big News
Trending

ಅರೆಬೆತ್ತಲೆ ಮೆರವಣಿಗೆ ನಡೆಸಿ ಉರುಳು ಸೇವೆ ಮಾಡಿ ಆಕ್ರೋಶ: ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಪ್ರಯತ್ನ

ಭಟ್ಕಳ:ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಕಳೆದ 18 ದಿನದಿಂದ ಮಿನಿ ವಿಧಾನಸೌಧದ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮೊಗೇರ ಸಮಾಜದವರು, ಅರೆಬೆತ್ತಲೆ ಮೆರವಣಿಗೆ ನಡೆಸಿ ಉರುಳು ಸೇವೆ ನಡೆಸಿ, ಆಕ್ರೋಶ ಹೊರಹಾಕಿದರು. ಈ ವೇಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೂ ನಡೆಯಿತು.

ಸತತ 18 ದಿನಗಳಿಂದ ಮೊಗೇರ ಸಮಾಜ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕೆಂದು ಸರಕಾರದ ಗಮನಕ್ಕೆ ತರಲು ವಿಭಿನ್ನ ಪ್ರತಿಭಟನೆ, ಮಕ್ಕಳಿಂದ ಹಿಡಿದು ವೃದ್ಧರ ತನಕ ಧರಣಿ ಸತ್ಯಾಗ್ರಹ ನಡೆಸುತ್ತಲೇ ಬಂದಿದ್ದು, ಸರಕಾರ ಹಾಗೂ ಜನಪ್ರತಿನಿಧಿಗಳಿಂದ ಆಶ್ವಾಸನೆ ಹೊರತು ಯಾವುದೇ ಪೂರಕ ಸ್ಪಂದನೆ ಸಿಗಲಿಲ್ಲ, ಹೀಗಾಗಿ ಸರಕಾರವನ್ನು ಎಚ್ಚರಿಸುವ ಹಿನ್ನೆಲೆ ಸಂಶುದ್ದೀನ್ ಸರ್ಕಲ್ ನಿಂದ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡ ಸ್ಥಳದ ತನಕ ಸಮಾಜದ ಎಲ್ಲಾ ಪುರುಷರು ಶರ್ಟ್ ತೆಗೆದು ಅರೆಬೆತ್ತಲೆ ಪತ್ರಿಭಟನೆ ನಡೆಸಿದರು. ಇದೇ ವೇಳೆ ಮುಂಡಳ್ಳಿಯ ಸೀತಾರಾಮ ಅಣ್ಣಪ್ಪ ಮೊಗೇರ ಎಂಬುವವನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅವರನ್ನು ಸಮಾಜದ ಜನರೇ ರಕ್ಷಿಸಿದರು.

ಅರೆಬೆತ್ತಲೆ ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಭಟ್ಕಳ ತಾಲೂಕು ಮೊಗೇರ ಸಮಾಜ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ ‘ ನಮ್ಮ ಧರಣಿಯು ದಿನಗಳೆದಂತೆ ಕಾವು ಹೆಚ್ಚಾಗುತ್ತಲಿದೆ. ಇದೇ ಧರಣಿಗೆ ಬರುತ್ತಿರುವ ಜನರ ಸಂಖ್ಯೆಯು ನಮಗೆ ಸಿಗುತ್ತಿರುವ ವಿವಿಧ ಸಮಾಜದ ಬೆಂಬಲವೂ ಉತ್ತಮವಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಉಸ್ತುವಾರಿ ಸಚಿವರು ಹಾಗೂ ಸರಕಾರ ಗಮನ ಹರಿಸದೇ ಇದ್ದಲ್ಲಿ ಧರಣಿ, ಪ್ರತಿಭಟನೆ ಇನ್ನು ಬೇರೆ ಹಂತಕ್ಕೆ ತಲುಪಲಿದೆ ಎಂದರು.

ಮೊಗೇರ ಸಮಾಜದ ಮುಖಂಡ ಭಾಸ್ಕರ ಮೊಗೇರ ಮಾತನಾಡಿ ‘ ನಮ್ಮ ಸಮಾಜದ ಯುವಪೀಳಿಗೆಗೆ ಸಂಯಮ ಕಳೆದುಕೊಳ್ಳುವ ಕೆಲಸವನ್ನು ಸರಕಾರ ಮಾಡಿದೆ. ಸರ್ಕಾರ ಸ್ಪಂದನೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಅವರೆ ಹೊಣೆ. ನ್ಯಾಯಾಲಯವೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ ಎಂದು ಸೂಚನೆ ನೀಡಿದರು ಸರಕಾರ ಸುಮ್ಮನಿರುವುದು ನೋಡಿದರೆ ಇದು ಸುಳ್ಳು ಸರಕಾರವೋ ಕಳ್ಳ ಸರಕಾರವೋ ಎಂಬುದು ಅರ್ಥವಾಗುತ್ತಿಲ್ಲ. ಸಮಾಜವನ್ನು ಕಣ್ಣೊರೆಸುವ ತಂತ್ರಕ್ಕೆ ಸರಕಾರ ಪ್ರಯತ್ನ ಮಾಡಬೇಡಿ. ಪ್ರತಿಭಟನೆಗೆ ಮಕ್ಕಳಿಂದ ಹಿಡಿದು ವ್ರದ್ಧರು ಬರುವಂತೆ ಸರಕಾರ, ಸಚಿವರು ಮಾಡಿರುವುದು ಅವರಿಗೆ ಅವರೇ ಮಾಡಿಕೊಂಡ ಅವಮಾನ ಎಂದರು.

ಸರಕಾರ ಆದಷ್ಟು ಬೇಗ ನಮ್ಮಮನವಿಗೆ ಸ್ಪಂದಿಸಿ ಜಾತಿ ಪ್ರಮಾಣ ಪತ್ರ ವಿತರಿಸಲದೇ ಇದ್ದಲ್ಲಿ ರಾಷ್ಟ್ರಪತಿಗಳಿಗೆ ದಯಾ ಮರಣ ಪತ್ರವನ್ನು ಸಮಾಜದ ಎಲ್ಲರು ಬರೆದು ನಮ್ಮ ಸಾವಿಗೆ ಸರಕಾರ, ಜಿಲ್ಲಾಡಳಿತ, ತಾಲೂಕಾಢಳಿತವೇ ಕಾರಣ ಎಂದು ಅರ್ಜಿ ಬರೆದು ಆತ್ಮಹತ್ಯೆ: ಮಾಡಿಕೊಳ್ಳುವುದೊಂದೆ ದಾರಿಯಾಗಿದೆ ಎಂದು ಸಮಾಜದ ಯುವಕರ ಎಚ್ಚರಿಕೆಯಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button