ಮುಗ್ದ ಜನರ ಮೇಲೆ ಅಧಿಕಾರಿಗಳ ದಬ್ಬಾಳಿಕೆ
ಎಸ್ ಎಲ್ ಘೋಟ್ನೆಕರ್ ಆರೋಪ
ಜೊಯಿಡಾ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜೊಯಿಡಾದ ಮುಗ್ದ ಜನರ ಮೇಲೆ ಅಧಿಕಾರಿಗಳಿಂದ ದಬ್ಬಾಳಿಕೆ ನಡೆಯುತ್ತಿದೆ. ಅದರಲ್ಲೂ ಪೋಲಿಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಿದೆ. ಜೊಯಿಡಾದ ಕೆಲ ಪೊಲೀಸ್ ಅಧಿಕಾರಿಗಳು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ನೊಡಿಕೊಳ್ಳುವ ಕೆಲಸ ಬಿಟ್ಟು ಉಸುಕಿನ ವಾಹನ ತಡೆದು ಹಪ್ತಾ ವಸೂಲಿ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಪ್ರಕರಣ ದಾಖಲಿಸುತ್ತೆನೆ ಎಂದು ಲಕ್ಷಾಂತ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಇವರ ಮೇಲೆ ಇದೆ. ಜೊಯಿಡಾದ ಇತಿಹಾಸದಲ್ಲಿ ಇಂತಹ ಅಧಿಕಾರಿಗಳನ್ನು ಕಂಡಿದ್ದಿಲ್ಲ. ಇವರ ಮೇಲೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಒಂದು ತಿಂಗಳೊಳಗೆ ಇವರನ್ನು ವರ್ಗಾವಣೆ ಮಾಡದಿದ್ದರೆ ರಾಮನಗರ ಮತ್ತು ಜೊಯಿಡಾ ಬಂದ್ ಮಾಡಿ ಉಘ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ ಹೇಳಿದರು.
ಅವರು ಜೊಯಿಡಾದಲ್ಲಿ ಶುಕ್ರವಾರ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದರು.ಕರೋನಾ ಕಾರಣದಿಂದ ಬದ ಜನರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ 19 ಸಂದರ್ಬದಲ್ಲಿ ಸಂಪೂರ್ಣ ವಿಪಲವಾಗಿದೆ. ಇದರ ಜೊತೆಗೆ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಜೆಲ್ ಬೇಲೆ ಏರಿಕೆಯಾಗುತ್ತಿರುವುದರಿಂದ ಜನ ತತ್ತರಿಸಿ ಹೊಗಿದ್ದಾರೆ. ಸರಕಾರದ ಯಾವುದೇ ಸಹಕಾರ ಜನರಿಗಾಗುತ್ತಿಲ್ಲ. 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆಯ ವಾಚರ್ ಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಕೂಡಲೆ ಇವರನ್ನು ಕೆಲಸಕ್ಕೆ ಸೇರಿಸಕೊಳ್ಳಬೇಕು ಎಂದರು.
ಈ ಸಂದರ್ಬದಲ್ಲಿ ಜೊಯಿಡಾ ಜಿ.ಪಂ ಸದಸ್ಯ ರಮೇಶ ನಾಯ್ಕ,ಪ್ರಧಾನಿ ಗ್ರಾ.ಪಂ ಸದಸ್ಯ ಕೃಷ್ಣಾ ದೇಸಾಯಿ, ಜೊಯಿಡಾ ಗ್ರಾ.ಪಂ ಸದಸ್ಯ ಸಂತೋಷ ಮಂಥೆರೋ,ಪ್ರಮುಖರಾದ ಕೃಷ್ಣಾ ಶಾಪೂರಕರ,ಮಾಭಳು ಕುಂಡಲಕರ,ಸುಬ್ಬು ಕರಿಮನೆ,ಮಹಾದೇವ ಪಾಟ್ನೆಕರ,ತುಷಾರ ಸುಂಗ್ಟನಕರ ಮುಂತಾದವರು ಉಪಸ್ಥಿತರಿದ್ದರು.
ರಾಮನಗರ ಬಾಗದಲ್ಲಿ ರೈತರ ಹೊಲದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಉಸುಕು ಶೇಕರಣೆಯಾಗಿದೆ. ಇದರಿಂದ ಅವರ ಬೇಳೆ ಬೇಳೇಯಲು ಕಷ್ಟವಾಗಿದೆ. ರೈತರು ಉಸುಕು ತೆಗೆದು ಬಳಕೆಗೆ ಉಪಯೋಗಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರೂ ಗಣಿ ಮತ್ತು ಭೂ ವಿಜ್ಞಾನ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಸೆ ಪರಿಹಾರ ಒದಗಿಸಿಲ್ಲ. ಬಡವರ ಮನೆ ಬಳಕೆಗೂ ಉಸುಕು ಸಿಗುತ್ತಿಲ್ಲ. ಸ್ಥಳಿಯ ಅಭಿವೃದ್ದಿ ಕಾಮಗಾರಿಗಳಿಗೆ ಉಸುಕು ಸಿಗದೆ ತೊಂದರೆಯಾಗಿದೆ. ಅಬಿವೃದ್ದಿ ಕೆಲಸಕ್ಕೆ ಸರಕಾರ ಒಂದೂ ಇದನ್ನು ಬಳಸಲು ಅನುಮತಿ ನೀಡಬೆಕು. ಇಲ್ಲಾ ಉಸುಕು ಸರಬರಾಜು ವ್ಯವಸ್ಥೆ ಸರಕಾರ ಮಾಡಬೇಕು. – ಎಸ್ ಎಲ್ ಘೋಟ್ನೆಕರ, ವಿಧಾನ ಪರಿಷತ್ ಸದಸ್ಯ
ಪಾಂಡರಿ ನದಿಯಲ್ಲಿ ಬೆಳಗಾವಿ ಬಾಗದ ಲೋಂಡಾದಲ್ಲಿ ಉಸುಕು ತೆಗೆಯಲು ಸರಕಾರ ಅನುಮತಿ ನೀಡಿದೆ ಆದರೆ 3 ಕಿಮಿ ಪಕ್ಕದ ರಾಮನಗರದಲ್ಲಿ ಉಸುಕು ತೆಗೆಯಲು ಅನುಮತಿ ಇಲ್ಲ. ಇದು ಯಾವ ನ್ಯಾಯ? ದೇಶಕ್ಕಾಗಿ ತಮ್ಮ ಭೂಮಿ ತ್ಯಾಗ ಮಾಡಿ ನಿರಾಶ್ರೀತ ರಾಮನಗರ ಜನರಿಗೆ ಉದ್ಯೋಗ ಕೂಡಾ ಇಲ್ಲದಿರುವ ಕಾರಣ ಸರಕಾರದ ಅಲ್ಲೋಂದು ಕಾಯ್ದೆ, ಇಲ್ಲೋಂದು ಕಾಯ್ದೆ ಸರಿಯಲ್ಲ. ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಬೇಕು. ನಾನು ಮುಖ್ಯ ಮಂತ್ರಿಗಳನ್ನು ಬೇಟಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದ್ಯದಲ್ಲಿಯೇ ಮನವಿ ಮಾಡುತ್ತೆನೆ. – ಎಸ್ ಎಲ್ ಘೋಟ್ನೆಕರ, ವಿಧಾನ ಪರಿಷತ್ ಸದಸ್ಯ
ವಿಸ್ಮಯ ನ್ಯೂಸ್, ಜೋಯ್ಡಾ