ಅಂಗಾರಕ ಸಂಕಷ್ಠಿ ಹಿನ್ನಲೆ: ಇಡಗುಂಜಿಯಲ್ಲಿ 100 ಕ್ವಿಂಟಾಲ್ ಪಂಚಖಾದ್ಯ ಶ್ರೀಗಣಪತಿಗೆ ಸಮರ್ಪಣೆ

ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಮಹಾಗಣಪತಿಯ ದರ್ಶನ ಪಡೆದು, ವಿಘ್ನ ನಿವಾರಣೆಗೆ ಪ್ರಾರ್ಥಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ನಾಡಿನ ಮೂಲೆಮೂಲೆಯಿಂದ ಭಕ್ತರು ಆಗಮಿಸಿ ಶ್ರೀವಿನಾಯಕ ದೇವರ ದರ್ಶನ ಪಡೆದಿರುವುದು ವಿಶೇಷವಾಗಿತ್ತು. ಮುಂಜಾನೆ 5 ಗಂಟೆಯಿoದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸುಮಾರು 300ಕ್ಕೂ ಹೆಚ್ಚು ಗಣಹೋಮ, ನೂರಾರು ಸತ್ಯಗಣಪತಿ ವೃತ ಕಥೆ ಹಾಗೂ 30,000ದಷ್ಟು ತೆಂಗಿನಕಾಯಿ ಸಮರ್ಪಣೆಯಾಗಿದೆ. 100 ಕ್ವಿಂಟಾಲ್ ಪಂಚಖಾದ್ಯ ಶ್ರೀಗಣಪತಿಗೆ ಸಮರ್ಪಣೆಯಾಗಿದೆ. ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರು ವಾಹನ ಪಾರ್ಕಿಂಗ್, ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆಯೊಂದಿಗೆ ಭದ್ರತೆ ಕಲ್ಪಿಸಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version