ಮೂರು ಹಾರ್ನಬಿಲ್ ಪಕ್ಷಿಗಳು ಮಣ್ಣಾಟವಾಡುತ್ತಿರುವ ಅಪರೂಪದ ದೃಶ್ಯವೊಂದು ಜೋಯಿಡಾ ತಾಲ್ಲೂಕಿನ ಕಾಳಿನದಿ ತಟದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಜೊಯಿಡಾ ಕಾಳಿನದಿ ತಟದಲ್ಲಿ ಹೆಚ್ಚಾಗಿ ಕಂಡುಬರುವ ಹಾರ್ನಬಿಲ್ ಪಕ್ಷಿಗಳು ಮೈಮೇಲೆ ಮಣ್ಣು ಎರಚಿಕೊಂಡು ತುಂಟಾಟ ಮಾಡುತ್ತಿದ್ದವು. ಒಂದರ ಮೇಲೊಂದು ಮಣ್ಣು ಎರಚಿಕೊಂಡು ಮಣ್ಣಲ್ಲಿ ಹೊರಳಾಟ ನಡೆಸುತ್ತಿರುವ ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಇದೀಗ ಈ ಮನಮೋಹಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಹಾರ್ನ್ ಬಿಲ್ ಪಕ್ಷಿಗಳು ವಿಶೇಷವಾಗಿ ಮೊಟ್ಟೆ ಇಡುವ ಸಂದರ್ಭದಲ್ಲಿ ಈ ರಿತಿ ಮಡ್ ಬಾತ್ ಮಾಡುವುದು ಸಾಮಾನ್ಯ. ಕಾಳಿ ನದಿ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಕ್ಷಿಗಳು ಪ್ರವಾಸಿಗರ ಆಕರ್ಷಣೆಯಾಗಿದ್ದು ಈ ಪಕ್ಷಿಗಳನ್ನು ನೋಡಲೆಂದೆ ಪಕ್ಷಿ ಪ್ರೇಮಿಗಳು ಕಾಳಿ ನದಿ ತೀರಗಳಿಗೆ ಆಗಮಿಸುತ್ತಾರೆ.
ವಿಸ್ಮಯ ನ್ಯೂಸ್, ಕಾರವಾರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.