Follow Us On

WhatsApp Group
Important
Trending

ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದಿಂದ  ಅಂಸಳ್ಳಿಯ ತಿಮ್ಮು ಗೌಡರಿಗೆ 30 ಸಾವಿರ ನೆರವು

ಹೊನ್ನಾವರ: ತಾಲೂಕಿನ ಅಂಸಳ್ಳಿಯ  ತಿಮ್ಮು ವೆಂಕ್ಟಾ ಗೌಡ  ಕಾಲು ಜಾರಿ ಬಿದ್ದು ಎರಡು ಕಾಲುಗಳ ಸ್ವಾಧೀನ ತೆಯನ್ನು ಕಳೆದುಕೊಂಡು ಹಾಸಿಗೆ ಯಲ್ಲೇ ಕಳೆದೊಂದು ವರ್ಷದಿಂದ ಜೀವನ ಸವೆಸುತ್ತಿದ್ದು ಹೆಂಡತಿ ಕ್ಯಾನ್ಸರ್ ಕಾಯಿಲೆ ಯಿಂದ ಈ ಮೊದಲೇ ಮರಣಹೊಂದಿದ್ದು 1ನೇ & 4ನೇ ತರಗತಿ ಓದುತ್ತಿರುವ ಮಕ್ಕಳಿದ್ದು ಅವರ ಆರೈಕೆ ಜೊತೆಗೆ ವಯಸ್ಸಾದ ತಾಯಿ ಇದ್ದು ಆರ್ಥಿಕ ವಾಗಿ ತುಂಬಾ  ತೊಂದರೆ ಅನುಭವಿಸುವಂತಾಗಿದೆ ಎಂಬುದನ್ನು ತಿಳಿದು ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾ ಹೊನ್ನಾವರ ಸಂಘದ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದಿಂದ ರೂ. 20000/ (ಇಪ್ಪತ್ತು ಸಾವಿರ) ಚೆಕ್ ಹಾಗೂ ವೈಯಕ್ತಿಕವಾಗಿ ಅಧ್ಯಕ್ಷರಾದ ಶ್ರೀ ಗೋವಿಂದ ಗೌಡ ರವರು ರೂ.5000/(ಐದುಸಾವಿರ), ಶ್ರೀ ಸುಬ್ರಾಯ ಗೌಡ ರವರು ರೂ. 5000/(ಐದುಸಾವಿರ) ರೂ.30000/ (ಮೂವತ್ತು ಸಾವಿರ) ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ  ಗೋವಿಂದಗೌಡ ಸಂಘದ ಪದಾಧಿಕಾರಿಗಳಾದ  ಸುಬ್ರಾಯ ಗೌಡ,  ಶ್ರೀಧರ ಗೌಡ, ಅಶೋಕ ಗೌಡ, ಮಂಜುನಾಥ ಗೌಡ, ಕೃಷ್ಣ ಗೌಡ, ಶಂಕರ ಗೌಡ, ವೆಂಕಟೇಶ ಗೌಡ, ಈಶ್ವರ ಗೌಡ, ವಿನಾಯಕ ಗೌಡ, ಜಂಗಾ ಗೌಡ, ಕುಪ್ಪು ಗೌಡ, ಅರುಣ ಗೌಡ, ಗಣಪತಿ ಗೌಡ , ಈರಣ್ಣ ಗೌಡ ಹಾಜರಿದ್ದರು.  

ಅವರ ಮಕ್ಕಳ ಶಿಕ್ಷಣದ ಕುರಿತಂತೆ  ಅವರು ಒಪ್ಪಿದರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಶ್ರೀಗಳ ಆಶೀರ್ವಾದ, ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಶಿಕ್ಷಣ ನೀಡುವ ಬಗ್ಗೆ  ಚರ್ಚಿಸಲಾಯಿತು. ಅದರಂತೆ ಅವರ ವೈದ್ಯಕೀಯ ನೆರವು ಕುರಿತು ಭರವಸೆ ನೀಡಲಾಯಿತು.

Back to top button