Follow Us On

WhatsApp Group
Important
Trending

ಪ್ರವಾಸಕ್ಕೆ ಬಂದ ನಾಲ್ವರು ನೀರುಪಾಲು: ಇಬ್ಬರ ಮೃತದೇಹ ಪತ್ತೆ, ಇನ್ನಿಬ್ಬರಿಗಾಗಿ ಶೋಧ

ಕುಮಟಾ: ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ನಾಲ್ವರು ನೀರು ಪಾಲಾದ ಘಟನೆ ತಾಲೂಕಿನ ಬಾಡದಲ್ಲಿ ನಡೆದಿದೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ©Copyright reserved by Vismaya 24×7

ಚೈತಶ್ರಿ ಮತ್ತು ಅರ್ಜುನ್ ಮೃತಪಟ್ಟಿದ್ದು,ಮೃತ ದೇಹ ಪತ್ತೆಯಾಗಿದೆ. ಕಿರಣ್ ಕುಮಾರ ಡಿ, ತೇಜಸ್ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಬೆಂಗಳೂರಿನಿoದ 80 ಜನ ವಿದ್ಯಾರ್ಥಿಗಳ ತಂಡ ಕುಮಟಾದ ಬಾಡದಲ್ಲಿರುವ ಖಾಸಗಿ ರೆಸಾರ್ಟ್ ಬಂದಿದ್ದು, ಈ ವೇಳೆ ಸಮುದ್ರಕ್ಕಿಳಿದು ಆಟವಾಡುವಾಗ ಅಲೆಯ ರಭಸಕ್ಕೆ ದುರಂತ ನಡೆದಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ಶೋಧಕಾರ್ಯ ನಡೆಸುತ್ತಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button