ಹೊನ್ನಾವರ: 150 ಕೆ.ಜಿ ಗೋಮಾಂಸ ಸಾಗಿಸುತ್ತಿದ್ದ ವೇಳೆ ಹೊನ್ನಾವರ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಆರೋಪಿ ಚಾಲಕ ಒಮಿನಿ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಹೊನ್ನಾವರ ತಾಲೂಕಿನ ಕುಳಕೋಡ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ವಾಹನಗಳ ಸಂಚಾರಿ ವಿಭಾಗದ ಪಿ ಎಸ್ ಐ ಮಾಹತೇಶ ನೇತ್ರತ್ವದಲ್ಲಿ ಬೇಳಗಿನಜಾವ ತಪಾಸಣೆ ನಡೆಸುತ್ತಿರುವ ವೇಳೆ ದಾಳಿ ನಡೆದಿದೆ.
ಈ ವೇಳೆ ಆರೋಪಿ ಓಮಿನಿ ವಾಹನವನ್ನು ನಿಲ್ಲಿಸಲು ಪೋಲಿಸರು ಕೈಸನ್ನೇ ಮಾಡಿದಾಗ ಓಮಿನಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಪರಾರಿ ಆಗಿದ್ದಾನೆ ಎಂದು ಪ್ರಕರಣದಲ್ಲಿ ದಾಖಲಾಗಿದೆ,
ಈ ಓಮಿನಿ ವಾಹನದಲ್ಲಿ ಅಂದಾಜು 27000 ರೂ ಮೌಲ್ಯದ ಸುಮಾರು 150 ಕೆ.ಜಿ ಗೋಮಾಂಸವನ್ನು ತುಂಬಿಕೋಂಡು ಮಾರಾಟ ಮಾಡುವ ಉದ್ದೇಶದಿಂದ ಯಾವುದೆ ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿಕೊಂಡು ಗೇರೂಸೋಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಓಮಿನಿ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ ಹೊನ್ನಾವರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.