ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ 2021-22ನೇ ಸಾಲಿನ ವಿದ್ಯಾರ್ಥಿಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ
ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ 2021-22 ನೇ ಸಾಲಿನ ವಿದ್ಯಾರ್ಥಿಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆಯನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ ಗಾಂವಕರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು ವಿದ್ಯಾರ್ಥಿಗಳಿಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಸಂಘವು ಹೆಜ್ಜೆ ಹಾಕಬೇಕು. ನಾನು ಸಹ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದೆ. ನಾನು ಕಲಿತ ಕಾಲೇಜಿನಲ್ಲಿ ಉದ್ಘಾಟಕನಾಗಿ ಭಾಗವಹಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದರು.
ಎ. ವಿ. ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉಮೇಶ ಜಿ. ಶಾಸ್ತ್ರಿ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರೀತಿ ಭಂಡಾರ್ಕರ್, ಬಿ.ಎಡ್. ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಪರಿಷ್ಕೃತ ಆವೃತ್ತಿ, ೨೦೨೨ ಟಿ.ಇ.ಟಿ. ಮತ್ತು ಸಿ.ಇ.ಟಿ. ಭಾಷಾಶಾಸ್ತ್ರ ಸಂಪನ್ಮೂಲ ಪುಸ್ತಕವಾದ ಮತ್ತು ಭಾಷಾಶಾಸ್ತ್ರ ಮತ್ತು ಭಾಷಾಬೋಧನಾಶಾಸ್ತ್ರ ಮತ್ತು ವಿಷಯಾಂತರಗತವಾಗಿ ಭಾಷೆ ಎನ್ನುವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಉಮೇಶ ಜಿ. ಶಾಸ್ತ್ರಿ ಪುಸ್ತಕದ ಕುರಿತು ವಿವರಣೆ ನೀಡಿದರು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪರ್ನಿದೇಶಕ ಶ್ರೀ. ಹರೀಶ ಗಾಂವಕರ್ ರವರನ್ನು ಹಾಗೂ ರಂಗಭೂಮಿ ನಿರ್ದೇಶಕ ಡಾ. ಶ್ರೀಪಾದ ಜಿ. ಭಟ್ ರವರನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರೆಲ್ಲರೂ ಸೇರಿ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಕಮಲಾ ಬಾಳಿಗಾ ಕಾಲೇಜಿನ gÁåAPï ವಿಜೇತ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಕೆನರಾ ಕಾಲೇಜು ಸೊಸೈಟಿ(ರಿ) ಯ ಕಾರ್ಯದರ್ಶಿಗಳಾದ ಶ್ರೀ. ಸುಧಾಕರ ವಿ. ನಾಯಕ, ವಿದ್ಯಾರ್ಥಿಸಂಘದ ಕಾರ್ಯಾಧ್ಯಕ್ಷ ವಿನಾಯಕ ಕೆ. ಭಟ್, ಕಾರ್ಯದರ್ಶಿ ಸಹನಾ ನಾಯ್ಕ ಇತರರಿದ್ದರು.