Important
Trending

ತಡರಾತ್ರಿ ಎಟಿಎಂ ಒಡೆದು ಹಣದೋಚುವ ಪ್ರಯತ್ನ: ಸದ್ದು ಕೇಳಿ ಸುತ್ತಮುತ್ತಲ ಜನರು ಸ್ಥಳಕ್ಕೆ ಬಂದಾಗ ಕಳ್ಳರು ಪರಾರಿ

ಕಾರವಾರ: ರಾಷ್ಟ್ರೀಕೃತ ಬ್ಯಾಂಕ್ ಒಂದಕ್ಕೆ ಸೇರಿದ ಎಟಿಎಂನನ್ನು ಒಡೆದು ಅಲ್ಲಿಂದ ಹಣದೋಚುವ ವಿಫಲ ಯತ್ನ ತಾಲೂಕಿನ ಮಲ್ಲಾಪುರ ಟೌನ್‌ಶಿಪ್‌ನಲ್ಲಿ ರಾತ್ರಿ ನಡೆದಿದೆ. ರಾತ್ರಿ ಸುಮಾರು ಒಂದು ಗಂಟೆಯ ವೇಳೆಯಲ್ಲಿ ಎಟಿಎಂನ ಸಿಸಿ ಕ್ಯಾಮೆರಾವನ್ನು ಒಡೆದು ಹಾಕಿ ನಂತರ ಎಟಿಎಂ ಅನ್ನು ಒಡೆಯಲು ಯತ್ನಿಸಿದ್ದಾರೆ ದುಷ್ಕರ್ಮಿಗಳು.

ಅಬ್ಬಾ! ಬೃಹತ್ ಕಾಳಿಂಗ ಸರ್ಪ: ಉರಗತಜ್ಞನ ರೋಚಕ ರಕ್ಷಣಾ ಕಾರ್ಯಾಚರಣೆ

ಆಗ ಶಬ್ದ ಕೇಳಿದ ಅಕ್ಕಪಕ್ಕದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಭಾಗದಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಘಟನೆಯಲ್ಲಿ ಅವರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಶುರುವಾಗಿದೆ. ಶ್ವಾನದಳ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button