Focus News
Trending

ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ

ಭಟ್ಕಳ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು , ಕಾಸರಗೊಡು ಜಿಲ್ಲಾ ಲೇಖಕರ ಸಂಘ ಹಾಗೂ ಶಂಕರಾಚಾರ್ಯ ಸಂಸ್ಥಾನ ಮಠ ಕಾಸರಗೋಡು ಇವರು ಮೂರು ದಿನಗಳ ಕಾಲ ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಕಾವ್ಯ ಕಾರ್ಯಾಗಾರದಲ್ಲಿ ಜಿಲ್ಲೆಯ ಭಾವ ಕವಿ ಉಮೇಶ ಮುಂಡಳ್ಳಿ ಅವರ ಹೊಸ ಭಾವಗೀತೆ ಇಂದು ಲೋಕಾರ್ಪಣೆ ಗೊಂಡಿದೆ.

ತಡರಾತ್ರಿ ಎಟಿಎಂ ಒಡೆದು ಹಣದೋಚುವ ಪ್ರಯತ್ನ: ಸದ್ದು ಕೇಳಿ ಸುತ್ತಮುತ್ತಲ ಜನರು ಸ್ಥಳಕ್ಕೆ ಬಂದಾಗ ಕಳ್ಳರು ಪರಾರಿ

ಮುಂಡಳ್ಳಿಯವರು ಸಾಹಿತ್ಯ ರಚಿಸಿ ಸ್ವರಸಂಯೋಜನೆ ಮಾಡಿ ಹಾಡಿರುವ ಹೊಸ ಭಾವಗೀತೆ ಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೋ.ಬಿ.ವಿ.ವಸಂತ ಕುಮಾರ್ ಅವರು ನಿನಾದ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಅವರು ಸಾಹಿತ್ಯ ಸಂಗೀತ ಒಬ್ಬರಲ್ಲಿಯೇ ಅಡಕವಾಗುವುದು ತುಂಬಾ ವಿರಳ. ಆದರೆ ಉಮೇಶ ಅವರು ಇಂತ ಸಾಧ್ಯತೆಗಳಿಂದ ನಮ್ಮ ಮುಂದಿರುವುದು ವಿಶೇಷವಾಗಿದೆ ಎಂದು ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ ಕನ್ನಡ ಸಾಹಿತ್ಯ ಪರಂಪರೆ ನಿಂತ ನೀರಲ್ಲ ಸದಾ ಬದಲಾವಣೆಗಳೊಂದಿಗೆ ಹೊಸತನಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ.ಇಂದು ಕಲೆ ಸಾಹಿತ್ಯ ಸಂಗೀತ ಮೇಳೈಸಿ ಕೊಂಡು ತಮ್ಮದೇ ಶೈಲಿಯಲ್ಲಿ ಕಾವ್ಯ ರಚಿಸಿ ಹಾಡುವ ಉಮೇಶ ಮುಂಡಳ್ಳಿ ಒಂದು ಉದಾಹರಣೆ ಯಾಗಿದ್ದಾರೆ.ಮುಂದಿನ ದಿನಗಳಲ್ಲಿ ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನಷ್ಟು ಕೊಡಗೆ ಸಲ್ಲಲಿ ಎಂದರು.

ವೇದಿಕೆಯಲ್ಲಿ ಕವಿ ನಾಗರಾಜ ತಲಕಾಡು, ಕೇರಳ ಕಾಸರಗೋಡು ಲೇಖಕರ ಸಂಘದ ಕಾರ್ಯದರ್ಶಿ ಪಿ.ಎನ್ .ಮುಳಿತ್ತಾಯ ,ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಉಮೇಶ ಮುಂಡಳ್ಳಿ ಅವರು ಈಗಾಗಲೇ ಹತ್ತು ಹಲವಾರು ತಮ್ಮ ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿರುವುದರ ಜೊತೆಗೆ ಅನೇಕ ಕವಿಗಳ ಗೀತೆಗಳನ್ನು ಸ್ವರಸಂಯೋಜನೆ ಮಾಡಿ ಹಾಡಿರುತ್ತಾರೆ.ಅನೇಕ ದೇವಾಲಯಗಳ ಭಕ್ತಿಗೀತೆಗಳನ್ನು ಸಹ ಹಾಡಿ ಬಿಡುಗಡೆಗೊಳಿಸಿದವರಾಗಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಹೊರರಾಜ್ಯಗಳಿಂದ ಅನೇಕ ಯುವ ಕವಿಗಳು ಸಂಶೋದನಾ ವಿದ್ಯಾರ್ಥಿಗಳು ಉಪನ್ಯಾಸಕರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಭಟ್ಕಳ

Back to top button