Join Our

WhatsApp Group
Important
Trending

ಮೊಬೈಲ್, ಬಟ್ಟೆಯೊಂದಿಗೆ ಮನೆಯಿಂದ ನಾಪತ್ತೆಯಾದ ವಿವಾಹಿತ ಮಹಿಳೆ: ಪತಿಯಿಂದ ದೂರು ದಾಖಲು

ಹೊರಗಡೆ ಹೋಗಿ ಬರುತ್ತೇನೆಂದು ಮಕ್ಕಳಿಗೆ ಹೇಳಿ ಹೋಗಿದ್ದಳು

ಸಿದ್ದಾಪುರ: ಮೊಬೈಲ್ ಹಾಗೂ ಬಟ್ಟೆಯೊಂದಿಗೆ ವಿವಾಹಿತ ಮಹಿಳೆ ಮನೆಯಿಂದ ನಾಪತ್ತೆಯಾದ ಘಟನೆ ತಾಲೂಕಿನ ಕಾನಸೂರು ಸಮೀಪದ ಗಿರಗಡ್ಡೆ ಬಳಿಯ ಈರಗೊಪ್ಪದಲ್ಲಿ ನಡೆದಿದೆ. ಹೆಂಡತಿಯನ್ನು ಹುಡುಕಿಕೊಡುವಂತೆ ಗಂಡನಿAದ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೀಮಾ ರಾಜು ನಾಯ್ಕ್ (28) ಕಾಣೆಯಾದ ಮಹಿಳೆಯಾಗಿದ್ದಾಳೆ.

ಮಕ್ಕಳನ್ನು ನೋಡಿಕೊಂಡು ಮನೆ ಕೆಲಸ ಮಾಡಿಕೊಂಡು ಇದ್ದ ಮಹಿಳೆಯು ಮೇ 7 ರ ಬೆಳಗ್ಗೆ 11 ಗಂಟೆಗೆ ಇಲ್ಲಿಯೇ ಹೋಗಿ ಬರುತ್ತೇನೆಂದು ಮಕ್ಕಳಿಗೆ ಹೇಳಿ ಹೋಗಿದ್ದಳು. ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೋದವಳು ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಕಾಣೆಯಾದ ಹೆಂಡತಿ ಯನ್ನು ಹುಡುಕಿಕೊಡುವಂತೆ ಆತನ ಗಂಡ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button