Focus NewsImportant
Trending

ಹಿಂಸಾತ್ಮಕವಾಗಿ ಅಕ್ರಮ ಗೋಸಾಗಟ : ಇಬ್ಬರು ಪರಾರಿ;ವಾಹನ ಸಮೇತ ಓರ್ವ ನ ವಶ

ಅಂಕೋಲಾ: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 4 ದನಗಳನ್ನು ಅಂಕೋಲಾ ಪೊಲೀಸರು ತಾಲೂಕಿನ ಮೊಗಟಾ ಹೈಸ್ಕೂಲ್ ಬಳಿ ದಾಳಿ ನಡೆಸಿ ರಕ್ಷಣೆ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಇಬ್ಬರು ಓಡಿ  ತಪ್ಪಿಸಿಕೊಂಡಿದ್ದಾರೆ. ಕಲಘಟಗಿ ದೇವಿಕೊಪ್ಪ ನಿವಾಸಿ ಚನ್ನಬಸು ನಾಗಪ್ಪ ಬಿಚ್ಚುಗತ್ತಿ (33) ಬಂಧಿತ ಆರೋಪಿಯಾಗಿದ್ದು ಪಕೀರೇಶ ಕಳಸೂರು ಮತ್ತು ಯಮುನಪ್ಪ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಬಸ್ ಹತ್ತುವ ವೇಳೆ ಪ್ರಯಾಣಿಕನ ಕಿಸೆ ಕತ್ತರಿಸಿ ಹಣ್ಣ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಕಿಸೆಗಳ್ಳ

ಆರೋಪಿತರು ಕಲಘಟಗಿಯಿಂದ ಹಿಲ್ಲೂರು ಮಾರ್ಗವಾಗಿ ದನಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಮೊಗಟಾ ಹೈಸ್ಕೂಲ್ ಬಳಿ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಸುಮಾರು 39 ಸಾವಿರ ಮೌಲ್ಯದ 4 ದನಗಳನ್ನು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.  ಆರೋಪಿತರು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ನಾಪತ್ತೆ ಆಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪೊಲೀಸರ ಕಾರ್ಯಕ್ಕೆ ಗೋ ಪ್ರಿಯರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ತಾಲೂಕಿನ ಕೆಲವೆಡೆ  ಗೋವುಗಳು ಮತ್ತು ಗೋಮಾಂಸ ಅಕ್ರಮ ಸಾಗಾಟ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದ್ದು,ಪೊಲೀಸರು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button