Join Our

WhatsApp Group
Focus News
Trending

ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಕುಮಟಾಕ್ಕೆ ಆಗಮಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ಮಾಡಿದ ಶಾಸಕ ದಿನಕರ ಶೆಟ್ಟಿ: ಮಾತುಕತೆ

ಕುಮಟಾ: ಖಾಸಗಿ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಬಾಡ ರೆಸಾರ್ಟ್ ಗೆ ಆಗಮಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿ ಮಂಡಲದ ಪದಾಧಿಕಾರಿಗಳು ಸಂಜೆ ಭೇಟಿ ಮಾಡಿ ಸ್ವಾಗತಿಸಿದರು.

ಕುಶಲೋಪರಿ ವಿಚಾರಿಸಿದ ಶಾಸಕರು ಕೆಲವು ಸಮಯ ರಾಜಕೀಯೇತರ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ತಮ್ಮ ಪತ್ನಿ ಸಮೇತ ಬಂದಿದ್ದ ಮಾಜಿ ಸಿಎಂ ಇಲ್ಲಿಯ ಪರಿಸರವನ್ನು ಆಸ್ವಾದಿಸಿ ಸಂತಸಪಟ್ಟರು.

ಬಿಜೆಪಿ ಮುಖಂಡ ಎಂ.ಎಂ.ಹೆಗಡೆ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಹಿಂದುಳಿದ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ, ಕಾರ್ಯದರ್ಶಿ ಪ್ರಶಾಂತ ನಾಯ್ಕ, ಹರೀಶ ನಾಯ್ಕ, ಮಂಜುನಾಥ ಆಚಾರಿ, ವಿಠ್ಠಲ ನಾಯಕ ಇದ್ದರು.

Back to top button