Important
Trending

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ “ ಸಪ್ತಪದಿ ಸರಳ ಸಾಮೂಹಿಕ ವಿವಾಹ ”: ವಧು-ವರರ ಹೆಸರು ನೊಂದಾಯಿಸಲು ಹೀಗೆ ಮಾಡಿ

ಶಿರಸಿ : ಶ್ರೀ ಕ್ಷೇತ್ರ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಬರುವ ದಿನಾಂಕ : 25-05-2022 ರ ಬುಧವಾರ ಬೆಳಿಗ್ಗೆ 10.50 ರಿಂದ 11.40 ರ ವರೆಗೆ ಕಟಕ ಲಗ್ನದ ಶುಭ ಮೂಹೂರ್ತದಲ್ಲಿ ಶ್ರೀ ದೇವಸ್ಥಾನದ ಸಭಾ ಮಂಟಪದಲ್ಲಿ ಮಾಡಬೇಕೆಂದು ನಿಶ್ಚಯಿಸಿದೆ. ಈ ಸಂದರ್ಭದಲ್ಲಿ ವಿವಾಹವಾಗಲಿಚ್ಛಿಸುವವರು ದಿನಾಂಕ : 22-05-2022 ರ ಒಳಗೆ ವಧೂ – ವರರ ಹೆಸರನ್ನು ನೋಂದಾಯಿಸಬೇಕು ಮತ್ತು ಈ ಕೆಳಗೆ ನಮೂದಿಸಿದ ದಾಖಲೆಗಳನ್ನು ಪೂರೈಸಬೇಕು.

(1) ವಧೂವಿಗೆ 18 ವರ್ಷ, ವರನಿಗೆ 21 ವರ್ಷ ಪೂರ್ಣಗೊಂಡಿರಬೇಕು.
(2). ಪಾಲಕರ ಒಪ್ಪಿಗೆ ಪತ್ರ ,
(3).ಜನ್ಮದಾಖಲೆ ಪ್ರಮಾಣ ಪತ್ರ / ಶಾಲಾ ದಾಖಲಾತಿ ಪ್ರಮಾಣ ಪತ್ರ,
(4) ವಧೂ-ವರರ ಪಾಸ್ ಪೋರ್ಟ ಅಳತೆಯ 2 ಫೋಟೋ ,
(5) ಚುನಾವಣಾ ಗುರುತಿನ ಚೀಟಿ /ಆಧಾರ ಕಾರ್ಡು/ವಾಸ್ತವ್ಯ ಪ್ರಮಾಣ ಪತ್ರ ಇವುಗಳ ದೃಢೀಕೃತ ಪ್ರತಿ
(6) ಕೋರ್ಟ ಅಫಿಡವಿಟ್.

ವರನಿಗೆ ಧೋತಿ- ಶಾಲು, ವಧುವಿಗೆ ಸೀರೆ- ರವಿಕೆ ಖಣ ಮತ್ತು ಮಂಗಲ ಸೂತ್ರವನ್ನು ಕೊಡಲಾಗುವುದು. ಎರಡೂ ಕಡೆಯಿಂದ ಒಟ್ಟೂ 10 ಜನ ಮೀರಕೂಡದು. ಸರಕಾರಿ ಉಪನೊಂದಣಾಧಿಕಾರಿಗಳಿoದ ಸದರಿ ವಿವಾಹವನ್ನು ರಜಿಸ್ಟರ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಶ್ರೀ ದೇವಸ್ಥಾನದ ಕಛೇರಿಯಲ್ಲಿ ಪಡೆಯಬಹುದು. ವಿವಾಹಕ್ಕೆ ನೊಂದಣಿ ಮಾಡಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕು ಶ್ರೀ ದೇವಸ್ಥಾನದ ವಿಶ್ವಸ್ಥ ಮಂಡಳಿಗೆ ಇರುತ್ತದೆ. ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಶ್ರೀ ದೇವಸ್ಥಾನದ ದೂರವಾಣಿ ಸಂಖ್ಯೆ : – 08384- 226360/200244

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button