Follow Us On

WhatsApp Group
Important
Trending

ಬಂದರು ರಸ್ತೆಯಲ್ಲಿ ಗಾಂಜಾ ಮಾರಾಟ: ಹೊನ್ನಾವರದಲ್ಲಿ ನಾಲ್ವರ ಬಂಧನ

ಹೊನ್ನಾವರ: ಪಟ್ಟಣದ ಬಂದರು ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ ಸಂದರ್ಭದಲ್ಲಿ ಹೊನ್ನಾವರ ಪೋಲಿಸರು ದಾಳಿ ನಡೆಸಿ 66 ಗ್ರಾಂ ತೂಕದ 7 ಪ್ಯಾಕೇಟ್ ಗಾಂಜಾ ಮತ್ತು 4 ಆರೋಪಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.,

ಹೊನ್ನಾವರ ಪಟ್ಟಣದ ಬಂದರು ರಸ್ತೆಯ ಮಹಾಲಕ್ಷ್ಮೀ ಗ್ಯಾಸ್ ಗೋಡಾನ್ ಪಕ್ಕದ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಮಾದಕ ವಸ್ತು ಇರುವ 7 ಪ್ಯಾಕೇಟ್‌ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಬಂಧಿತ ಆರೋಪಿತರು ಪಟ್ಟಣದ ಬಿ.ಇ.ಓ ಆಫೀಸ್ ರಸ್ತೆಯ ನಿವಾಸಿ ಸುಹಾಸ ಮಂಜುನಾಥ ರೋಡ್ರಿಗಿಸ್, ರಾಯಲಕೇರಿಯ ಚಿನ್ಮಯ ಆನಂದು ಪಾಲೇಕರ, ಜಡ್ಡಿಕೇರಿಯ ಅಭಿಷೇಕ ಜನಾರ್ಧನ ನಾಯ್ಕ, ಗುಣವಂತೆಯ ಜಗದೀಶ ಶಂಭು ಗೌಡ ಎಂದು ಗುರುತಿಸಲಾಗಿದೆ.

ಅನಧಿಕೃತವಾಗಿ 66 ಗ್ರಾಂ ತೂಕದ ಸುಮಾರು 3500 ರೂಪಾಯಿ ಮೌಲ್ಯದ 7 ಗಾಂಜಾ ಮಾದಕ ವಸ್ತು ಇರುವ ಪ್ಯಾಕೇಟ್‌ಗಳನ್ನು ಬಂದರ ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದರು. ಗಾಂಜಾ ಪ್ಯಾಕೆಟ್ ಹಾಗೂ ಸ್ಕೂಟಿ ವಾಹನ ವಶಪಡಿಸಿಕೊಂಡು ಆರೋಪಿತರ ಮೇಲೆ ಪೊಲೀಸರು ಹೊನ್ನಾವರ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೋಂಡು ತೆನಿಖೆ ಮುಂದುವರಿಸಿದ್ದಾರೆ

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button