Follow Us On

WhatsApp Group
Important
Trending

M.B.B.S. ನಲ್ಲಿ ಮೊದಲ Rank ಗಳಿಸಿದ ಸಹನಾ ನಾಯಕ| ಕ್ರಿಮ್ಸ್ ಮೊದಲ ಬ್ಯಾಚಿನ ಮೊದಲ ಸ್ಥಾನ ಗಳಿಸಿದ ಅಂಕೋಲಾದ ಕುವರಿ| ಮಾಜಿ ಯೋಧ ಮತ್ತು ಶಿಕ್ಷಕ ದಂಪತಿಗಳ ಪುತ್ರಿ,

ಅಂಕೋಲಾ: ತಾಲೂಕಿನ ವಾಸರೆ ಗ್ರಾಮದ ಮೇಲಿನಗುಳಿ ಮಜಿರೆಯ ಮಾಜಿ ಯೋಧ ಸುರೇಶ ನಾಗಪ್ಪ ನಾಯಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಮಂಗಲ ಕೆ. ಪಿ.ಎಸ್.ನಲ್ಲಿ ಶಿಕ್ಷಕಿಯಾಗಿರುವ ಸವಿತಾ ನಾಯಕ ದಂಪತಿಗಳ ಪುತ್ರಿ ಸಹನಾ ನಾಯಕ ಎಂ ಬಿ ಬಿ.ಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತನ್ನ ತಂದೆ ತಾಯಿ, ಊರು, ತಾಲೂಕು, ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಇವರು ಎಂ ಬಿ ಬಿ ಎಸ್ ಫಲಿತಾಂಶ ಪ್ರಕಟಿಸಿದ್ದು ಕಾರವಾರ ಕ್ರಿಮ್ಸ್ ನ ಮೊದಲ ಬ್ಯಾಚ್(2016 ) ರ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿದ್ದ 135 ವಿದ್ಯಾರ್ಥಿಗಳಲ್ಲಿ 124 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಅವರಲ್ಲಿ ಸಹನಾ ಸುರೇಶ್ ನಾಯಕ ಮೊದಲ ರ್ಯಾಂಕ್ ಗಳಿಸಿ, ಪ್ರಥಮ ಬ್ಯಾಚ್ ನ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಎಸ್. ಎಸ್ ಎಲ್ ಸಿ (CBSE) ಯಲ್ಲಿಯೂ ಶೇ. 100 ರ ಫಲಿತಾಂಶ ದಾಖಲಿಸಿದ್ದ ಈ ಗ್ರಾಮೀಣ ಕುವರಿ, ದ್ವಿತೀಯ ಪಿಯುಸಿಯಲ್ಲಿ ಶೇ 99 ಅಂಕಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಳು. ಸಹನಾಳ ಸಹೋದರ ಸೂರಜ ನಾಯಕ ಸಹ ಮೂಡಬಿದ್ರೆಯ ಅಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಎಂದು ವರೆಸಿದ್ದು, ಅಕ್ಕನಂತೆ ಓದು, ಆಟ ಪಾಠಗಳಲ್ಲಿ ಮುಂದಿದ್ದು, ಇವರೆಲ್ಲರ ರೂ , ಇತ್ತೀಚಿನ ದಿನಗಳಲ್ಲಿ IAS ,ಇನ್ನಿತರ ಮಹತ್ತರ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತಾರು ಯುವ ಪ್ರತಿಭೆಗಳ ಸಾಲಿನಲ್ಲಿ ಗುರುತಿಸಿಕೊಂಡು ವಾಸರೆ ಗ್ರಾಮದ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ.

ಕ್ರೀಡೆಯಲ್ಲಿಯೂ ಮೇಲುಗೈ : ಪಾಠದ ಜೊತೆ ಜೊತೆಯಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡ ಈ ಗ್ರಾಮೀಣ ಪ್ರತಿಭೆ, ಥ್ರೋ ಬಾಲ್ ನಲ್ಲಿ ಕರ್ನಾಟಕ ತಂಡ ಮುನ್ನಡೆಸಿ ಜೈಪುರದ ರಾಷ್ಟ್ರ ಮಟ್ಟದ ಪಂದ್ಯಾವಳಿ ಸೇರಿದಂತೆ ಹತ್ತಾರು ಕ್ರೀಡಾ ಕೂಟಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ, ಪ್ರಶಸ್ತಿ ಗಳಿಸಿದ್ದಾಳೆ, ಸಹನಾ ನಾಯಕರ ವಿಶೇಷ ಸಾಧನೆಗೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್, ಪ್ರಮುಖರಾದ ಆರ್. ಟಿ. ಮಿರಾಶಿ, ವಾಸರೆ ಗ್ರಾಮಸ್ಥರು ಮತ್ತು ತಾಲೂಕಿನ ಹಾಗೂ ಜಿಲ್ಲೆಯ ಅನೇಕ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಬಿಬಿಎಸ್ ಪದವಿ ಮುಗಿಸಿದ ವಿದ್ಯಾರ್ಥಿಗಳು ಈಗ ಮೇ 4 ರಿಂದ ಕಾರವಾರ ಕ್ರಿಮ್ಸ್ ನಲ್ಲಿಯೇ ವೈದ್ಯರಾಗಿ 1 ವರ್ಷಗಳ ಕಾಲ ಜಿಲ್ಲೆಯ ಜನತೆಗೆ ಸೇವೆ ನೀಡಲಿದ್ದು, ಕರೋನಾ ಸಂಕಷ್ಟ ಕಾಲದಲ್ಲಿ ಇವರೆಲ್ಲರ ಸೇವೆ ವರದಾನ ಎನ್ನಲಾಗಿದೆ. ಅವರೆಲ್ಲರ ಭವಿಷ್ಯ ಉಜ್ಜಲವಾಗಲೆಂದು ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಮತ್ತು ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button