Important
Trending

ಟ್ಯಾಂಕರ್ ನಿಂದ ನೈಟ್ರೋಜನ್ ಸೋರಿಕೆ: ಮೋಡದಂತೆ ಆವರಿಸಿಕೊಂಡ ರಾಸಾಯನಿಕ

ಕುಮಟಾ: ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಕೆಲಕಾಲ ಸಾರ್ವಜನಿಕರು ಆತಂಕಗೊಂಡ ಘಟನೆ ತಾಲೂಕಿನ ಕಡೆಕೊಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ನಲ್ಲಿ ಏಕಾಏಕಿ ರಾಸಾಯನಿಕವೊಂದು ಸೋರಿಕೆಯಾಗಿ ಮೋಡಗಳಂತೆ ಆವರಿಸಿದೆ. ಇದರಿಂದಾಗಿ ಸಾರ್ವಜನಿಕರು, ಪ್ರಯಾಣಿಕರು ಆತಂಕಗೊಂಡರು. ಆದರೆ ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ ಸ್ವಲ್ಪ ಸಮಸ್ಯೆಯಾಗಿದ್ದು ತಂತ್ರಜ್ಞರಿಗೆ ಕರೆ ಮಾಡಿದ್ದೇನೆ ಎಂದು ಚಾಲಕ ಮಾಹಿತಿ ನೀಡಿದ್ದು, ಆತಂಕದ ವಾತಾವರಣ ತಿಳಿಯಾಗಿತ್ತು.

ವಿಸ್ಮಯ ನ್ಯೂಸ್, ಕುಮಟಾ

Back to top button