Follow Us On

Google News
Important
Trending

ಕಾರಿನಲ್ಲಿ ಬಂದು ರಥಬೀದಿಯಲ್ಲಿ ದನ ಕದ್ದೊಯ್ದ ದುಷ್ಕರ್ಮಿಗಳು: ತಾಲೂಕಿನವರದ್ದೆ ಕೈವಾಡ ಶಂಕೆ: ತನಿಖೆ ಆರಂಭಿಸಿದ ಪೊಲೀಸರು

ಕುಮಟಾ: ಜಿಲ್ಲೆಯಲ್ಲಿ ದನಗಳ್ಳತನ ಪ್ರಕರಣಗಳು ಮತ್ತೆ ಸದ್ದುಮಾಡುತ್ತಿದ್ದು, ಸ್ವಿಪ್ಟ್ ಕಾರ್ ಒಂದರಲ್ಲಿ ಬಂದ ಖದೀಮರು ದನವನ್ನು ಹಿಂಸಾತ್ಮಕವಾಗಿ ತುಂಬಿ, ಕದ್ದೊಯ್ದಿರುವ ಘಟನೆ ಕುಮಟಾ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಡರಾತ್ರಿ ಬಂದ ದನಗಳ್ಳರು ದನವನ್ನು ಹಿಂಸಾತ್ಮಕವಾಗಿ ಕಾರ್‌ನಲ್ಲಿ ತುಂಬುತ್ತಿರುವ ದೃSಜಿಥಿ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಷ್ಟು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನದಾಗಿ ದನಗಳ್ಳತನ ಪ್ರಕರಣಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಕುಮಟಾ ಪಟ್ಟಣದ ಹೃದಯಭಾಗವಾದ ರಥಬೀದಿಯಲ್ಲಿ ದನಗಳ್ಳತನವಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಒಡಾಡುವ ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ರಥಬೀದಿಯಲ್ಲಿ, ಏಪ್ರಿಲ್ 24 ರ ತಡರಾತ್ರಿ ಸುಮಾರು 1 ಘಂಟೆಗೆ ಸ್ವಿಪ್ಟ್ ಕಾರ್ ಒಂದರಲ್ಲಿ ಬಂದ ದನಗಳ್ಳರು ದನವೊಂದನ್ನು ಹಿಂಸಾತ್ಮಕವಾಗಿ ಕಾರ್‌ನಲ್ಲಿ ತುಂಬಿ ಕದ್ದೊಯ್ದಿದ್ದಾರೆ. ಈ ಒಂದು ಕೃತ್ಯ ಶ್ರೀ ವೆಂಕಟರಮಣ ದೇವಾಲಯದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಒಂದು ಕೃತ್ಯದಲ್ಲಿ ಕುಮಟಾ ತಾಲೂಕಿನವರದ್ದೆ ಕೈವಾಡ ಇರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕುಮಟಾ ಪಟ್ಟಣದಾದ್ಯಂತ ರಾತ್ರಿಯ ವೇಳೆ ಬೀಟ್ ಪೋಲಿಸರು ಸಂಚರಿಸುತ್ತಿರುತ್ತಾರೆ. ಪೊಲೀಸರ ಎಲ್ಲಾ ಚಲನ ವಲನವನ್ನು ಅರಿತು, ಎಲ್ಲವನ್ನೂ ಮೊದಲೇ ಯೋಜನೆ ಮಾಡಿ ದನಗಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

ದನವನ್ನು ಹಿಂಸಾತ್ಮಕವಾಗಿ ಕಾರ್‌ನಲ್ಲಿ ತುಂಬುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೋಡಗುತ್ತಿದ್ದಂತೆ, ವಿಷಯ ತಿಳಿದ ಕುಮಟಾ ಪಿ.ಎಸ್.ಐ ನವೀನ ನಾಯ್ಕ ಅವರ ತಂಡ ಶ್ರೀ ವೆಂಕಟರಮಣ ದೇವಾಲಕ್ಕೆ ಭೇಟಿ ನೀಡಿ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಂತೆಯೇ ಈ ಘಟನೆಯ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button