Focus News
Trending

ಅಂಕೋಲಾ ತಾಲೂಕಿನ ಒಟ್ಟಾರೆ ಪಿ.ಯು ಫಲಿತಾಂಶ ಶೇ 78.42.

ಹಿಮಾಲಯ ಪದವಿಪೂರ್ವ ಕಾಲೇಜ್‍ಗೆ ಪ್ರಥಮ ಸ್ಥಾನ

[sliders_pack id=”1487″]

ಅಂಕೋಲಾ : ರಾಜ್ಯದಾದ್ಯಂತ ದ್ವಿತೀಯ ಪಿ.ಯು ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಯ 99 ಪದವಿಪೂರ್ವ ಕಾಲೇಜುಗಳಿಂದ ಒಟ್ಟಾರೆಯಾಗಿ ಶೇ 80.97 ಫಲಿತಾಂಶ ದಾಖಲಾಗಿದ್ದು ಈ ಮೂಲಕ 2019-20ನೇ ಸಾಲಿನಲ್ಲಿ ಉತ್ತರಕನ್ನಡಕ್ಕೆ 3ನೇ ಸ್ಥಾನ ಲಭಿಸಿದೆ. ಅಂಕೋಲಾ ತಾಲೂಕಿನ ಒಟ್ಟು 9 ಪದವಿಪೂರ್ವ ಕಾಲೇಜುಗಳಿಂದ ಶೇ 78.42 ಫಲಿತಾಂಶ ದಾಖಲಾಗಿದ್ದು, ಹಲವು ಆತಂಕ ಹಾಗೂ ಸಮಸ್ಯೆಗಳ ನಡುವೆ ಉತ್ತಮ ಫಲಿತಾಂಶ ದಾಖಲಾಗಿದೆಯೆಂದೇ ಹೇಳಬಹುದಾಗಿದೆ.
ಹಿಮಾಲಯ ಪದವಿಪೂರ್ವ ಕಾಲೇಜ್‍ನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ90, ವಿಜ್ಞಾನ ವಿಭಾಗದಲ್ಲಿ ಶೇ97 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ93.5 ಆಗಿದ್ದು ತಾಲೂಕಿಗೆ ಪ್ರಥಮಸ್ಥಾನ ಪಡೆದುಕೊಂಡಿದೆ.
ಗ್ರಾಮೀಣ ಪ್ರದೇಶವಾದ ಅಗಸೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಒಟ್ಟಾರೆ ಫಲಿತಾಂಶ ಶೇ 87.5 ಆಗುವ ಮೂಲಕ ತಾಲೂಕಿಗೆ ದ್ವಿತೀಯಸ್ಥಾನ ಗಳಿಸಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಂದ ಒಟ್ಟಾರೆಯಾಗಿ ಶೇ 85.14 ಫಲಿತಾಂಶ ದಾಖಲಿಸುವ ಮೂಲಕ ಗೋಕಲೆ ಸೆಂಟನರಿ ಪದವಿಪೂರ್ವ ಕಾಲೇಜು ತೃತೀಯಸ್ಥಾನ ಪಡೆದುಕೊಂಡಿದೆ.
ಉಳಿದಂತೆ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜು ಒಟ್ಟ್ಟೂ ಫಲಿತಾಂಶ ಶೇ 84, ಪಿ.ಎಮ್ ಪದವಿಪೂರ್ವ ಕಾಲೇಜು ಒಟ್ಟ್ಟೂ ಫಲಿತಾಂಶ ಶೇ 80.76, ಅವರ್ಸಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಒಟ್ಟ್ಟೂ ಫಲಿತಾಂಶ ಶೇ 79.61, ಸರ್ಕಾರಿ ಪದವಿಪೂರ್ವ ಕಾಲೇಜು ಅಂಕೋಲಾ ಒಟ್ಟ್ಟೂ ಫಲಿತಾಂಶ ಶೇ 70.85, ಕೆ.ಎಲ್.ಇ ಪದವಿಪೂರ್ವ ಕಾಲೇಜು ಒಟ್ಟ್ಟೂ ಫಲಿತಾಂಶ ಶೇ 62.67, ಸರ್ಕಾರಿ ಪದವಿಪೂರ್ವ ಕಾಲೇಜು ಹಿಲ್ಲೂರಿನ ಒಟ್ಟು ಫಲಿತಾಂಶ ಶೇ 60.71 ಆಗಿರುತ್ತದೆ
ವಿದ್ಯಾರ್ಥಿಗಳ ಪಾಲಿನ ಭವಿಷ್ಯದ ಮೈಲಿಗಲ್ಲೇಂದೇ ಗುರುತಿಸಿಕೊಂಡಿರುವ ಪಿ.ಯು ಶಿಕ್ಷಣವು ಅತ್ಯಂತ ಮಹತ್ವದ್ದಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ. ನಾನಾ ಕಾರಣಗಳಿಂದ ಪರೀಕ್ಷೆ ಪಾಸು ಮಾಡಲಾಗದ ವಿದ್ಯಾರ್ಥಿಗಳು ಧೃತಿಗೆಡದೆ ಮರುಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತಾಗಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button