Follow Us On

WhatsApp Group
Important
Trending

ಮೂರುದಿನದ ಹಸುಗೂಸನ್ನು ಬಟ್ಟೆ ಸುತ್ತಿ ತೊಟ್ಟಿಲಿನಲ್ಲಿ ಹಾಕಿ ಬಿಟ್ಟು ಹೋದ ಹೆತ್ತವರು

ಕಾರವಾರ: ಆಸ್ಪತ್ರೆಯ ಆವರಣದಲ್ಲಿದ್ದ ತೊಟ್ಟಿಲಲ್ಲಿ ಮೂರುದಿನದ ಹಸುಗೂಸನ್ನು ಹೆತ್ತವರು ಬಿಟ್ಟುಹೋದ ಘಟನೆ ಜಿಲ್ಲೆಯ ಮುಂಡಗೋಡಿನ ಜ್ಯೋತಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗಿನ ಜಾವ ಆಸ್ಪತ್ರೆ ಮುಂದಿರುವ ತೊಟ್ಟಿಲ್ಲಿ ಕಂದಮ್ಮನನ್ನು ಹಾಕಿ ಹೋಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದು, ಹಸುಗೂಸನ್ನು ದತ್ತು ಕೇಂದ್ರಕ್ಕೆ ನೀಡಲು ಕ್ರಮಕೈಗೊಳ್ಳಲಾಗಿದೆ.

ಆಸ್ಪತ್ರೆಯಲ್ಲಿ ಮಗು ಸಾಕಲಾಗದವರು ತೊಟ್ಟಿಲಲ್ಲಿ ಹಾಕಿ ಎಂಬಸೂಚನಾ ಫಲಕ ಇದ್ದು, ಅಲ್ಲಿದ್ದ ತೊಟ್ಟಿಲಲ್ಲಿ ಹಸುಗೂಸಿಗೆ ಬಟ್ಟೆ ಸುತ್ತಿ, ಇಟ್ಟು ಪೋಷರು ನಾಪತ್ತೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button