Important
Trending

ಅಂಕೋಲಾ ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಎನ್ ಎಂ ಮೇಸ್ತ ಅಧಿಕಾರ ಸ್ವೀಕಾರ

ಅಂಕೋಲಾ: ಶಿರಸಿ ನಗರ ಸಭೆ ಕಛೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ನೀಲಕಂಠ ಎಮ್ ಮೇಸ್ತ ಅವರು ಅಂಕೋಲಾ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಜಿಲ್ಲೆಯ ಹೊನ್ನಾವರ ಮೂಲದ ಮೇಸ್ತ ಇವರು,
2004 ರಲ್ಲಿ ಭಟ್ಕಳ ಪುರಸಭೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಆರಂಭಿಸಿ,2011 ರಿಂದ 2013 ರ ವರೆಗೆ ಕಾರವಾರ ಜಿಲ್ಲಾಧಿಕಾರಿ ಕಚೇರಿ,
2014 ರಿಂದ 2015ರ ವರೆಗೆ ಯಲ್ಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ, 2016 ರಿಂದ 2017 ಕುಮಟಾ ಪುರಸಭೆ ಕಚೇರಿ ವ್ಯವಸ್ಥಾಪಕರಾಗಿ ಮತ್ತು ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

2019 ರಿಂದ 2021 ರವರೆಗೆ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯಾಗಿ,ತದನಂತರ ಪ್ರಸಕ್ತ ಅವಧಿಯವರೆಗೆ ಶಿರಸಿ ನಗರಸಭೆ ಕಚೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಈ ಹಿಂದೆ 2018 ರಿಂದ 2019 ರ ಅವಧಿಯಲ್ಲಿ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ದ್ದ ಮೇಸ್ತ ಅವರು ಈಗ ಮತ್ತೆ 2022ರಲ್ಲಿ ಅಂಕೋಲಾ ಪುರಸಭೆ ಮುಖ್ಯಾ ಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಸುವ ಮೂಲಕ ಅಂಕೋಲಾ ಪುರಸಭೆಗೆ ಎರಡನೇ ಬಾರಿ ಮುಖ್ಯ ಅಧಿಕಾರಿಯಾಗಿ ಆಡಳಿತ ಚುಕ್ಕಾಣಿ ಹಿಡಿದಂತಾಗಿದೆ.

ಜಿಲ್ಲೆಯ ವಿವಿಧೆಡೆ ನಾನಾ ಹುದ್ದೆಗಳಲ್ಲಿ ಒಟ್ಟಾರೆಯಾಗಿ ಸುಮಾರು 17 ವರ್ಷ ಸೇವೆ ಸಲ್ಲಿಸಿ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.ಅಂಕೋಲಾ ಪುರಸಭೆಗೆ ಗ್ರೇಡ್ (1) ಚೀಫ್ ಆಫೀಸರ ಅಗಿ ಬಂದಿದ್ದ ಯುವ ಮಹಿಳಾ ಅಧಿಕಾರಿ ತಮ್ಮ ಸೇವಾವಧಿಯ ಮೊದಲ ವರ್ಷ ಪೂರ್ಣಗೊಳ್ಳುವ ಮೊದಲೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಮೇಸ್ತ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕೋವಿಡ್ ಮತ್ತಿತರ ಸಂಕಷ್ಟಗಳ ನಡುವೆಯೂ ಕೆಲ, ತಮಗೆ ನಿರೀಕ್ಷಿತ ಪ್ರಮಾಣದ ಬೆಂಬಲ ದೊರೆಯದಿದ್ದರೂ, ತಕ್ಕ ಮಟ್ಟಿಗೆ ಆಡಳಿತಾತ್ಮಕ ಸುಧಾರಣೆಗೆ ಪ್ರಯತ್ನಿಸಿದ್ದರು. ಅಂಕೋಲಾ ಪುರಸಭೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ,ಆಡಳಿತಾತ್ಮಕ ವಿಚಾರಗಳು ಸದಾ ಸುದ್ದಿಯಲ್ಲಿದ್ದು,ಪುರಸಭೆ ಕಛೇರಿ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೂ ಸಹ ಕೆಲವರ ಆಂತರಿಕ ಕಚ್ಚಾಟ, ಪರಸ್ಪರ ಹೊಂದಾಣಿಕೆ ಕೊರತೆ ಮತ್ತಿತರ ಕಾರಣಗಳಿಂದ ಜನಸಾಮಾನ್ಯರು ಆಡಳಿತ ವ್ಯವಸ್ಥೆ ಬಗ್ಗೆ ಅಸಯ್ಯ ಪಡುವಂತಾಗಿದೆ ಎಂಬ ಮಾತು ಕೇಳಿಬರುತ್ತಲೇ ಇದೆ.

ಜನಪ್ರತಿನಿಧಿಗಳೇ ಇರಲಿ,ಅಧಿಕಾರಿ ಹಾಗೂ ಸಿಬ್ಬಂದಿಗಳೇ ಇರಲಿ ತಮ್ಮ ಅಹಂ ಬಿಗುಮಾನ ಬಿಟ್ಟು ಸಾರ್ವಜನಿಕ ಸೇವಾ ದೃಷ್ಟಿಯಿಂದ ಇನ್ನುಮುಂದಾದರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವಂತಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button